ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಕಿರುಕುಳ ಆರೋಪ; ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು

Published : 5 ನವೆಂಬರ್ 2024, 6:11 IST
Last Updated : 5 ನವೆಂಬರ್ 2024, 6:11 IST
ಫಾಲೋ ಮಾಡಿ
Comments
ಬೆಳಗಾವಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ರುದ್ರಣ್ಣ ಯಡವಣ್ಣವರ ಹಾಕಿದ ಆತ್ಮಹತ್ಯೆಯ ಸಂದೇಶ

ಬೆಳಗಾವಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ರುದ್ರಣ್ಣ ಯಡವಣ್ಣವರ ಹಾಕಿದ ಆತ್ಮಹತ್ಯೆಯ ಸಂದೇಶ

ಈ ಪ್ರಕರಣವನ್ನು ಅತಿ ಸೂಕ್ಷ್ಮವಾಗಿ, ಯಾವುದೇ ಒತ್ತಡವಿಲ್ಲದೇ ತನಿಖೆ ಮಾಡಲು ತಿಳಿಸಿದ್ದೇನೆ. ಪೊಲೀಸರಿಗೆ ಎಲ್ಲ ಸಹಕಾರ ನೀಡಲಾಗುವುದು
ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪರ್ಸೆಂಟೇಜ್‌ ಅಂಗಡಿ ತೆಗೆದಿದ್ದಾರೆ. ರುದ್ರಣ್ಣ ಆತ್ಮಹತ್ಯೆಗೆ ಸಚಿವರ ಒತ್ತಡ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರು ರಾಜೀನಾಮೆ ನೀಡಬೇಕು
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಭ್ರಷ್ಟಾಚಾರದ ಪಾಪದ ಫಲ ತುಂಬಿದೆ. ಬೆಳಗಾವಿಯಲ್ಲಿ ಸಣ್ಣ ಕೆಲಸಕ್ಕೂ ಜನ ಲಂಚ ಕೊಡುವ ಪರಿಸ್ಥಿತಿ ಬಂದಿದೆ. ಸಮಗ್ರ ತನಿಖೆ ಆಗಲಿ
ಬಸನಗೌಡ ಪಾಟೀಲ ಯತ್ನಾಳ, ಶಾಸಕ
ಎಚ್ಚರಿಕೆ ವಹಿಸದ ತಹಶೀಲ್ದಾರ್‌
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರುದ್ರಣ್ಣ ಸೋಮವಾರ ಸಂಜೆ 7.31ಕ್ಕೆ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಸಂದೇಶ ಹಾಕಿದ್ದರು. ಅದನ್ನು ನೋಡಿ ತಹಶೀಲ್ದಾರ್‌ ಬಸವರಾಜ ನಾಗರಾಳ ಅವರನ್ನು ಗ್ರೂಪಿನಿಂದ ಹೊರಹಾಕಿದರು. ಆದರೆ, ಈ ವಿಷಯವನ್ನು ಪೊಲೀಸರಿಗೆ ಅಥವಾ ಮನೆಯವರಿಗೆ ಏಕೆ ತಿಳಿಸಲಿಲ್ಲ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಮಂಗಳವಾರ ಬೆಳಿಗ್ಗೆ ಕಚೇರಿಗೆ ಬಂದ ತಹಶೀಲ್ದಾರ್‌ ಬಸವರಾಜ ನಾಗರಾಳ, ರುದ್ರಣ್ಣನ ಶವ ನೋಡಿ ಮರಳಿ ಹೋದರು. ಸ್ಥಳದಲ್ಲಿದ್ದ ಪೊಲೀಸರೂ ಅವರನ್ನು ವಶಕ್ಕೆ ಪಡೆಯಲಿಲ್ಲ. ನಂತರ ಅವರು ಇಡೀ ದಿನ ಕಾಣಿಸಿಕೊಳ್ಳಲಿಲ್ಲ.
ಲಕ್ಷ್ಮಿ ಹೆಬ್ಬಾಳಕರ ವಜಾ ಮಾಡಿ: ಅಶೋಕ
ಬೆಂಗಳೂರು: ರುದ್ರಣ್ಣ ಅವರ ಆತ್ಮಹತ್ಯೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ವರ್ಗಾವಣೆ ದಂಧೆಯೇ ಕಾರಣ ಎಂಬ ಅನುಮಾನವಿದ್ದು, ಅವರನ್ನು ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ‘ನಿಮ್ಮ ಸರ್ಕಾರದ ಭ್ರಷ್ಟಾಚಾರದ ದಾಹಕ್ಕೆ ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕು’ ಎಂದು ಅವರು ‘ಎಕ್ಸ್‌’ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT