ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರಿನ ಕಲಿಗಳು ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯಕ್ಕೆ ಈಗ 200 ವರ್ಷ. ಆ ರಕ್ತಚರಿತ್ರೆಯ ಪುಟಗಳನ್ನು ಮೆಲುಕು ಹಾಕಲು ಪ್ರತಿ ವರ್ಷ ಉತ್ಸವ ಆಚರಿಸಲಾಗುತ್ತದೆ. ಆದರೆ, ಉತ್ಸವದ ಜತೆಗೆ ಉತ್ಖನನವೂ ಮುಖ್ಯ ಎಂಬುದು ಸಂಶೋಧಕರ ಅಭಿಮತ.

ಹಂಪಿ, ಹಳೆಬೀಡು, ಬೇಲೂರು, ಬಾದಾಮಿ, ಮೈಸೂರು ಸೇರಿ ಐತಿಹಾಸಿಕ ಸ್ಥಳಗಳ ವೈಭವ ಬೆಳಕಿಗೆ ಬಂದಿದ್ದು ಉತ್ಖನನದ ಮೂಲಕ. ಪುರಾತತ್ವ ಇಲಾಖೆ ಇಂಥ ಪ್ರಯತ್ನವನ್ನು ಕಿತ್ತೂರು ವಿಷಯದಲ್ಲಿ ಮಾಡಬೇಕು. ಯುದ್ಧಾವಶೇಷ, ಅರಮನೆಯೊಳಗಿನ ವಸ್ತುಗಳು, ಅಸ್ತ್ರಗಳನ್ನು ನೆಲದಲ್ಲೇ ಹುದುಗಿಸಿಟ್ಟ ಸಾಧ್ಯತೆ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.

ದತ್ತಕ ಕಾಯ್ದೆ ವಿರೋಧಿಸಿದ್ದರಿಂದ 1824ರ ಅಕ್ಟೋಬರ್ 23ರಂದು ಮೊದಲ ಆಂಗ್ಲೋ– ಕಿತ್ತೂರು ಯುದ್ಧ ಆರಂಭವಾಗುತ್ತದೆ. ಅದೇ ಅಕ್ಟೋಬರ್ 25ರಂದು ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಗುಂಡೇಟಿನಿಂದ ಸಾಯುತ್ತಾನೆ. ಅವನ ರಾಜಕೀಯ ಸಲಹೆಗಾರರಾದ ಎ.ಆರ್.ಸ್ಟವನ್ಸನ್, ಇಲಿಯಟ್, ಶಿರಸ್ತೇದಾರ ಶ್ರೀನಿವಾಸರಾವ್ ಬಂಧಿಯಾಗುತ್ತಾರೆ. ಥ್ಯಾಕರೆಯ ಮಕ್ಕಳನ್ನು ಚನ್ನಮ್ಮ ರಕ್ಷಣೆ ಮಾಡಿ ಅರಮನೆಯಲ್ಲಿ ಇಟ್ಟುಕೊಳ್ಳುತ್ತಾಳೆ. ಸಣ್ಣ ಸಂಸ್ಥಾನದಿಂದ ಹೀನಾಯ ಸೋಲುಂಡ ಬ್ರಿಟಿಷರಿಗೆ ತಾಳಿಕೊಳ್ಳದ ಮುಖಭಂಗವಾಗುತ್ತದೆ. ಖುದ್ದುಹೋದ ಡೆಕ್ಕನ್ ಕಮಿಷನರ್ ವಿಲಿಯಂ ಚಾಪ್ಲಿನ್ 1824ರ ನವೆಂಬರ್ 24ಕ್ಕೆ ಅಪಾರ ಸೈನ್ಯದಿಂದ ದಂಡೆತ್ತಿ ಬರುತ್ತಾನೆ. ಇದೇ ನೆಲದ ಕೆಲ ಕುತಂತ್ರಿಗಳನ್ನು ಬಳಸಿ ಮೋಸದಿಂದ ಯುದ್ಧ ಮಾಡುತ್ತಾನೆ. ಕಿತ್ತೂರಿನ ತೋಪು ಸಿಡಿಯದಂತೆ, ಮದ್ದು ಸ್ಫೋಟಗೊಳ್ಳದಂತೆ ಸಂಚು ರೂಪಿಸುತ್ತಾನೆ. ಡಿಸೆಂಬರ್ 5ರಂದು ಕೋಟೆ ಛಿದ್ರವಾಗುತ್ತದೆ. ಸೈನಿಕರು ಸಾಯುತ್ತಾರೆ. ಅಪಾರ ಸಂಪತ್ತು ಲೂಟಿಯಾಗುತ್ತದೆ.

₹16 ಲಕ್ಷ ಹಣ, ₹4 ಲಕ್ಷ ಮೌಲ್ಯದ ಆಭರಣ, 3,000 ಕುದುರೆ, 2,000 ಒಂಟೆ, 100 ಆನೆ, 23 ತೋಪು, 56 ಬಂದೂಕು, ಬಿಲ್ಲು–ಬಾಣ, ಕತ್ತಿ, ಗುರಾಣಿಗಳನ್ನು ವಶಕ್ಕೆ ಪಡೆದಿದ್ದಾಗಿ ಚಾಪ್ಲಿನ್ ಕಂಪನಿ ಸರ್ಕಾರಕ್ಕೆ ದಾಖಲೆ ನೀಡಿದ್ದಾನೆ.

‘ಆದರೆ, ಕಿತ್ತೂರು ಸಂಸ್ಥಾನದಲ್ಲಿ ಎಣಿಕೆಗೆ ಸಿಗದಷ್ಟು ಸಂಪತ್ತು ಇತ್ತು. ಸೋಲಿನ ಬಳಿಕ ರಾಣಿ ಅದನ್ನೆಲ್ಲ ಆನೆ, ಒಂಟೆ, ಕುದುರೆ, ಕತ್ತೆಗಳ ಮೇಲೆ ಹೇರಿ ನಾಡಾಡಿಗಳ ಪಾಲು ಮಾಡಿದಳು. ಯುದ್ಧಾವಧಿಯಲ್ಲಿ ಸಂಪತ್ತನ್ನು ಹುದುಗಿಸಿ ಇಟ್ಟಿರುವ ಸಾಧ್ಯತೆ ಇದೆ. ನಿಖರತೆಗಾಗಿ ಕಿತ್ತೂರು ನೆಲದ ಉತ್ಖನನ ನಡೆಯಬೇಕಿದೆ’ ಎಂಬುದು ಜಾನಪದ ಸಂಶೋಧಕರ ಅಭಿಮತ.

ಅರ್ಧ ಉತ್ಖನನ: ಕೆಲ ವರ್ಷಗಳ ಹಿಂದೆ ಕಿತ್ತೂರ ಕೋಟೆಯ ಒಳಗಡೆ ನಡೆದ ಉತ್ಖನನದಿಂದ ಸಂಸ್ಥಾನ ಕಾಲದ ಹಲವಾರು ಪ್ರಕಾರದ ಕಟ್ಟಡ ಅವಶೇಷಗಳು ಸಿಕ್ಕಿವೆ. ವೈಜ್ಞಾನಿಕವಾಗಿ ಕಲ್ಲು– ಗಾರೆಯಿಂದ ನಿರ್ಮಿಸಿರುವ ಕಟ್ಟಡ, ಅಧಿಕಾರಿಗಳ ಕೊಠಡಿಗಳು, ದೇವರ ಕೋಣೆ, ಬಟ್ಟೆ ತೊಳೆಯುವ ಮನೆ ಮುಂತಾದವು ಅಲ್ಲಿವೆ. ಇಡೀ ಕೋಟೆಯ ಪರಿಸರವನ್ನು ವ್ಯವಸ್ಥಿತವಾಗಿ ಉತ್ಖನನ ಮಾಡಿದರೆ ಇನ್ನಷ್ಟು ಕುರುಹುಗಳು ಸಿಗುತ್ತವೆ ಎನ್ನುತ್ತಾರೆ ಅವರು.

ಬೃಹತ್ ಕೋಟೆ ಹುಡುಕಬೇಕಿದೆ

‘ಸದ್ಯ ಕಿತ್ತೂರಿನಲ್ಲಿ ಇರುವುದು ಅರಮನೆ ಹಾಗೂ ಅದರ ಸುತ್ತಲಿನ ರಕ್ಷಣಾ ಗೋಡೆ ಮಾತ್ರ. ಅದು ಪೂರ್ಣ ಕೋಟೆ ಅಲ್ಲ. ಸಂಸ್ಥಾನದ ರಕ್ಷಣೆಗೆ ಬೃಹತ್ ಕೋಟೆಯೂ ಇದ್ದಿರಬಹುದು. ಸೆರೆಮನೆ ನ್ಯಾಯಾಲಯ ಎಲ್ಲವೂ ಇರಲೇಬೇಕು. ಅವುಗಳನ್ನು ಹುಡುಕಬೇಕಿದೆ. ಸೂರ್ಯ ಮುಳುಗದ ಸಾಮ್ರಾಜ್ಯ’ವನ್ನು ಎದುರು ಹಾಕಿಕೊಳ್ಳಲು ಧೈರ್ಯ– ಶೌರ್ಯ ಮಾತ್ರ ಸಾಲುವುದಿಲ್ಲ. ಯುದ್ಧ ಸಾಮಗ್ರಿಗಳು ಸೈನ್ಯ ಸಂಪತ್ತು ಯುದ್ಧೋತ್ತರ ಪರಿಣಾಮ ತಾಳಿಕೊಳ್ಳುವ ಸಾಮರ್ಥ್ಯ ಬೇಕು. ಚನ್ನಮ್ಮನಿಗೆ ಆ ಸಾಮರ್ಥ್ಯವಿತ್ತು ಎಂದು ತೋರಿಸಿದ್ದಾಳೆ. ಈಗ ನಾವು ತಿಳಿದಿರುವ ಇತಿಹಾಸಕ್ಕಿಂತಲೂ ಬಹುದೊಡ್ಡ ವಿಷಯ ಇನ್ನೂ ಮಣ್ಣಿನಲ್ಲಿ ಅಡಗಿದೆ. ಅದರ ಉತ್ಖನನ ಆಗಬೇಕು’ ಎನ್ನುತ್ತಾರೆ ಸಂಶೋಧಕ ಸಂತೋಷ ಹಾನಗಲ್ಲ.

ರಹಸ್ಯ ಹೊರಬರಬೇಕಿದೆ

‘ವಿದ್ವಾಂಸರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಹಾಗೂ ಎ.ಬಿ. ವಗ್ಗರ ಈಗಾಗಲೇ ಮುಂಬೈ ಪುಣೆಯಲ್ಲಿನ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಲಾವಣಿ ಗೀಗೀ ದುಂದುಮೆ ಕೋಲುಪದ ಹಂತಿಪದ ಗರತಿಹಾಡುಗಳಲ್ಲಿ ಸಿಕ್ಕ ಸಾಲುಗಳೂ ಇತಿಹಾಸ ಕಟ್ಟಿಕೊಟ್ಟಿವೆ. ಆದರೆ ಉತ್ಖನನ ಇನ್ನಷ್ಟು ರಹಸ್ಯ ಹೊರಗೆಳೆಯಬಹುದು’ ಎನ್ನುವುದು ಪ್ರೊ.ಸಿ.ಕೆ.ನಾವಲಗಿ ಅವರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.