ಬೆಳಗಾವಿ: ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಆಯೋಜಿಸಿರುವ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನಕ್ಕೆ ನ.21ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಚಾಲನೆ ದೊರೆಯಲಿದೆ.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಅವರ ನೇತೃತ್ವದಲ್ಲಿ ಮಂಗಳವಾರ ಎಲ್ಲೆಡೆ ಗೀತಾ ಕಲಿಕಾ ಕೇಂದ್ರಗಳು ಆರಂಭವಾಗಲಿವೆ. ಪಾಠ ಮಾಡಲು ತರಬೇತಿ ಪಡೆದ ತಂಡಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ. ಡಿ.22ರಂದು ಗೀತಾ ಜಯಂತಿ ಹಾಗೂ 23ರಂದು ಮಹಾಸಮರ್ಪಣೆ ನಡೆಯಲಿದೆ.

ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯ; ಈ ನಾಲ್ಕು ಆಶಯಗಳ ಅನುಷ್ಠಾನಕ್ಕಾಗಿ ಗೀತಾ ಅಭಿಯಾನ ಆರಂಭಿಸಲಾಗಿದೆ. ಈ ಬಾರಿ ನಡೆಯುತ್ತಿರುವುದು 17ನೇ ಅಭಿಯಾನ. ಸೋಂದಾ ಶ್ರೀಗಳು 2007ರಲ್ಲಿ ಆರಂಭಿಸಿದ ಗೀತೋಪದೇಶದ ಪಾಠ ಈಗ ರಾಜ್ಯ, ಹೊರ ರಾಜ್ಯದಲ್ಲೂ ವಿಸ್ತರಿಸಿದೆ. ರಾಜ್ಯಮಟ್ಟದಿಂದ ಗ್ರಾಮಮಟ್ಟದವರೆಗೆ ಸಮಿತಿಗಳನ್ನು ರಚಿಸಲಾಗಿದೆ. ಮನೆ, ಮಠ, ಮಂದಿರ, ಜೈಲು ಹೀಗೆ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಬೋಧನೆ ಮಾಡಲಾಗುವುದು.

ಈವರೆಗೆ 6,900ಕ್ಕೂ ಅಧಿಕ ಶಾಲೆಗಳಲ್ಲಿ ಗೀತಾ ಅಭಿಯಾನ ನಡೆದಿದೆ. 42.28 ಲಕ್ಷ ಗೀತಾ ಪುಸ್ತಕ ವಿತರಿಸಲಾಗಿದೆ. ಹಲವು ಕಡೆ ಮಸೀದಿ, ಚರ್ಚ್‌ಗಳಲ್ಲೂ ಈ ಅಭಿಯಾನ ನಡೆಸಿ ಧರ್ಮ ಸಮನ್ವಯತೆ ಸಾರಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.