ಬೆಳಗಾವಿ: ‘ಪಾಕಿಸ್ತಾನ ಜಿಂದಾಬಾದ್’ ಎಂಬ ಹೇಳಿಕೆ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಸಚಿವರು, ಶಾಸಕರು ಕೂಡ ದೇಶದ್ರೋಹಿಗಳು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಮತ್ತಿತರರು ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಒಂದು ವಾರ ತೆಗೆದುಕೊಂಡಿದ್ದಾರೆ. ಎಫ್ಎಸ್ಎಲ್ ವರದಿ ಬಹಿರಂಗ ಪಡಿಸಲಿಲ್ಲ. ಬಾಂಬ್ ಪ್ರಕರಣ ಸೇರಿ ಮತ್ತಿತರ ಘಟನೆಗಳು ಮರುಕಳುಸುತ್ತಿವೆ. ಜನ ಈ ಸರ್ಕಾರದ ನಡವಳಿಕೆ ಗಮನಿಸುತ್ತಿದ್ದಾರೆ’ ಎಂದು ದೂರಿದರು.

‘ಬಿಜೆಪಿ ಹೋರಾಟದ ಕಾರಣ ಮೂವರು ದೇಶದ್ರೋಹಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಇನ್ನು ಹೆಚ್ಚು ಜನರಿದ್ದಾರೆ. ಘಟನೆ ಹಿನ್ನೆಲೆ ಏನು, ಪಾಕ್ ಪರ ಘೋಷಣೆ ಕೂಗಲು ಪ್ರಚೋದನೆ ಕೊಟ್ಟಿದ್ದು ಯಾರು ಎಂದು ಜನರ ಮುಂದೆ ಹೇಳಬೇಕು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದರೂ ಬಹಿರಂಗ ಪಡಿಸಿಲ್ಲ. ಆರೋಪಿಗಳಿಗೆ ಒಳಗೆ ರಾಜಾತಿಥ್ಯ ನೀಡದೇ ಸೂಕ್ತ ಕ್ರಮ ಕೈಗೊಳ್ಳಬೇಕು. ಅಮಾಯಕರು ಎಂದು ಸಚಿವರು, ಶಾಸಕರೇ ನಿಮ್ಮ ಮೇಲೆ ಒತ್ತಡ ತರಬಹುದು. ಹಾಗಾಗಿ, ಈ ವಿಷಯ ಗಂಭೀರವಾಗಿ ತೆಗೆದುಕೊಂಡು ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದೂ ಆಗ್ರಹಿಸಿದರು.

‘ರಾಜ್ಯ ಸರ್ಕಾರದ ಮೇಲೆ ಜನರಿಗೆ ಇನ್ನೂ ವಿಶ್ವಾಸ ಬಂದಿಲ್ಲ. ಇವರ ‘ಮೈ ಬ್ರದರ್’ ಧೋರಣೆಯ ಕಾರಣ ಉಗ್ರಗಾಮಿಗಳು, ದೇಶದ್ರೋಹಿಗಳನ್ನು ಮೃದು ಧೋರಣೆಯಿಂದ ಕಾಣುತ್ತಿದ್ದಾರೆ’ ಎಂದೂ ಟೀಕಿಸಿದರು.
.ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಅಗತ್ಯ ಬಿದ್ದರೆ ಮಾತ್ರ ಎನ್ಐಎಗೆ– ಸಿದ್ದರಾಮಯ್ಯ.ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಆರೋಪ: ಮೂವರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.