ಹುಕ್ಕೇರಿ: ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ರಾಜ್ಯದಲ್ಲಿ ಪ್ರಥಮ ಮತ್ತು ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು.

ಶುಕ್ರವಾರ ತಾಲ್ಲೂಕಿನ ಯರನಾಳದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಡಿಸಿಸಿ ಬ್ಯಾಂಕ್ ತನ್ನ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿದ ರಾಜ್ಯದ ಏಕೈಕ ಸಹಕಾರಿಯಾಗಿದೆ ಎಂದರು. ರೈತರ ಆರ್ಥಿಕ ಬೆನ್ನುಲುಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಡಿಸಿಸಿ ಬ್ಯಾಂಕಿನ ಠೇವುದಾರರು, ಸಾಲಗಾರರು, ರೈತಾಪಿ ವರ್ಗ, ಸಿಬ್ಬಂದಿ ಹಾಗೂ ಈ ಬ್ಯಾಂಕಿನ ಅವಲಂಬಿತ ಸಕ್ಕರೆ ಕಾರ್ಖಾನೆಗಳ ಕಬ್ಬು ಬೆಳೆಗಾರರ, ಕಾರ್ಮಿಕ ವರ್ಗ ಸೇರಿದಂತೆ ಇದರ ಮೇಲೆ ಅವಲಂಬಿತ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಹಿತದೃಷ್ಟಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಂಡಿರುವೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದರು.

ಅಧಿಕಾರ ಶಾಶ್ವತವಲ್ಲ, ನಾವು ಅಧಿಕಾರದಲ್ಲಿದ್ದಾಗ ಕೈಗೊಂಡ ಜನಪರ ಕಾರ್ಯಗಳು ಶಾಶ್ವತ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೂ ರಾಜಕಾರಣ ಅಂಟಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ಸದಸ್ಯರು ಬ್ಯಾಂಕು ಹಾಳಾಗದಂತೆ ನಿಗಾ ವಹಿಸಲು ವಿನಂತಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಹಾಗೂ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಸಹಕಾರಿ ಸಂಘದ ಅಧ್ಯಕ್ಷ ಮಗೆಪ್ಪ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ನೂರು ವರ್ಷದ ಪ್ರಗತಿ ವಿವರಿಸಿದರು.

ಕಾಣಿಕೆ: ಸಹಕಾರಿ ಸದಸ್ಯರಿಗೆ ಶತಮಾನೋತ್ಸವ ನೆನಪಾಗಿ ಜಿಮಖಾನಗಳನ್ನು ನೀಡಿದರು.

ಹೊಸೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಪಾಟೀಲ್, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಉಪಾಧ್ಯಕ್ಷ ಬಸಗೌಡ ಪಾಟಿಲ, ಹಿರಾ ಶುಗರ್ಸ್ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕ ರವೀಂದ್ರ ಹಿಡಕಲ್ ಇದ್ದರು.

ನನ್ನಿಂದ ಬಿಡಿಸಿಸಿ ಬ್ಯಾಂಕ್ ಬೆಳೆದಿಲ್ಲ. ನಾನು ಅದರಿಂದ ಅತ್ಯುತ್ತಮ ಸಹಕಾರಿಯಾಗಿ ಬೆಳೆದಿದ್ದೇನೆ. ನನ್ನ ಉಸಿರು ಇರುವವರೆಗೂ ಅನ್ನದಾತನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ
ರಮೇಶ್ ಕತ್ತಿ ನಿರ್ದೇಶಕ ಬಿಡಿಸಿಸಿ ಬ್ಯಾಂಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.