ಚಿಕ್ಕೋಡಿ: ‘ಮತದಾನ ಮಾಡುವಂತೆ ಬಿಜೆಪಿಯವರೇ ಆಗಲಿ, ಕಾಂಗ್ರೆಸ್ಸಿನವರೇ ಆಗಲಿ ಹಣ ನೀಡಲು ಬಂದರೆ ಅವರ ಮುಖದ ಮೇಲೆ ಎಸೆಯಿರಿ. ಕಾಂಗ್ರೆಸ್ ವರ್ಷಪೂರ್ತಿ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಿದೆ. ಬಿಜೆಪಿಯವರು ಚುನಾವಣೆಯಲ್ಲಿ ಹಣದ ಆಮಿಷ ತೋರಿಸಿ ಗೆಲುವು ಸಾಧಸಿಬೇಕು ಎಂದುಕೊಂಡಿದ್ದಾರೆ. ಇದಕ್ಕೆ ಯಾರೂ ಅವಕಾಶ ಕೊಡಬೇಡಿ’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹೇಳಿದರು.

ತಾಲ್ಲೂಕಿನ ಯಡೂರವಾಡಿ ಗ್ರಾಮದಲ್ಲಿ ಶುಕ್ರವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ‘ಪ್ರತಿ ವರ್ಷ ಕೃಷ್ಣಾ ನದಿ ತೀರದ ಗ್ರಾಮಸ್ಥರು ಪ್ರವಾಹದಿಂದ ತೊಂದರೆ ಪಡುತ್ತಿರುವುದನ್ನು ಗಮನಿಸಿ, ತಾಲ್ಲೂಕಿನ ಚಂದೂರ– ಸೈನಿಕ ಟಾಕಳಿ, ಕಲ್ಲೋಳ– ಯಡೂರ ಬೃಹತ್ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿವೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ಯಡೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳು ಧನಗರ, ಸದಸ್ಯರಾದ ಅಜಿತ ಕಿಲ್ಲೇದಾರ, ಸಂಜು ಪಿರಾಜೆ, ಮಚೇಂದ್ರ ಧನಗರ, ಕಾಕಾಸಾಹೇಬ ಘಾಟಗೆ, ಕಿಟ್ಟು ಯಳ್ಳವಂತೆ, ವಿಶ್ವನಾಥ ಮಾನೆ, ಆರ್ ಆರ್ ಚವ್ಹಾಣ, ಅರ್ಜುನ ಪಿರಾಜೆ, ಕುಮಾರ ಪಿರಾಜೆ, ಸಂಬು ಪಿರಾಜೆ, ನಿಂಗಪ್ಪ ಪಿರಾಜೆ, ಗಣಪತಿ ಮಾನೆ, ಶಂಕರ ಜುಗಳೆ, ಕೊಂಡಿಬಾ ಧನಗರ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.