ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರ ಹೆಸರು ಹಾಗೂ ಚಿತ್ರಗಳನ್ನು ಬಳಸಿ ಇನ್‌ಸ್ಟಾಗ್ರಾಂ ಖಾತೆ ತೆರೆದ ದುಷ್ಕರ್ಮಿಗಳು, ಜನರಿಂದ ಹಣ ಕೇಳಿದ ಪ್ರಕರಣ ಬೆಳಕಿಗೆ ಬಂದಿದೆ.

ಸ್ವತಃ ಡಾ.ಸಂಜೀವ ಅವರೇ ಸಾರ್ವಜನಿಕರ ಗಮನಕ್ಕೆ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲಿ ಡಿಸಿಪಿ ಆಗಿದ್ದಾಗಿನ ಹುದ್ದೆ, ಫೋಟೊಗಳನ್ನು ಈ ಖಾತೆಗೆ ಬಳಸಿಕೊಳ್ಳಲಾಗಿದೆ. ಜನರಿಗೆ ಮೆಸೇಜ್ ಮಾಡಿ ಹಣ ಕೂಡ ಕೇಳಿದ್ದಾರೆ. ಇದನ್ನು ಯಾರೂ ನಂಬಬಾರದು. ಈ ಅಕ್ರಮ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಉದ್ಯಮಿಗಳು, ಶಿಕ್ಷಕರು, ಪತ್ರಕರ್ತರು, ಅನಾಥಾಶ್ರಮ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ತೆರೆದು ಸಹಾಯಕ್ಕಾಗಿ ಹಣ ಕೇಳುವ ಪ್ರಕರಣಗಳು ನಡೆಯುತ್ತಲೇ ಇವೆ. ಈಗ ಸ್ವತಃ ಪೊಲೀಸ್ ಅಧಿಕಾರಿ ಹೆಸರಲ್ಲೇ ನಕಲಿ ಖಾತೆ ಸೃಷ್ಠಿಸಿದ್ದು ‘ಆನ್‌ಲೈನ್ ಕಳ್ಳರ’ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.