ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕಾಕ | ಹೆಚ್ಚಿದ ಘಟಪ್ರಭೆ ನದಿ ನೀರು; ಲೋಳಸೂರು ರಾಜ್ಯ ಹೆದ್ದಾರಿ ಸೇತುವೆ ಬಂದ್‌

Published 26 ಜುಲೈ 2024, 15:07 IST
Last Updated 26 ಜುಲೈ 2024, 15:07 IST
ಅಕ್ಷರ ಗಾತ್ರ

ಗೋಕಾಕ: ಘಟಪ್ರಭಾ ನದಿ ನೀರಿನ ಹರಿವು ಏರಿಕೆಯಾದ್ದರಿಂದ ನಗರ ಹೊರವಲಯದ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಅಂಚಿಗೆ ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತ ಸಂಚಾರ ನಿಷೇಧಿಸಿದೆ.

ಹಿಡಕಲ್ ಜಲಾಶಯದಿಂದ 40 ಸಾವಿರ ಕ್ಯುಸೆಕ್‌, ಹಿರಣ್ಯಕೇಶಿ ನದಿಗೆ 23 ಸಾವಿರ ಕ್ಯುಸೆಕ್‌, ಮಾರ್ಕಂಡೇಯ ನದಿಗೆ 7,400 ಕ್ಯುಸೆಕ್‌, ಬಳ್ಳಾರಿ ನಾಲಾದಿಂದ 3,000 ಕ್ಯುಸೆಕ್‌ ಸೇರಿ ಒಟ್ಟು 73 ಸಾವಿರ ಕ್ಯುಸೆಕ್‌ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ.

ನಗರದ ಹಳೆ ದನಗಳ ಪೇಟೆ, ಕುಂಬಾರ ಓಣಿಗೆ ಪ್ರವಾಹದ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅವರೆಲ್ಲರನ್ನೂ ಎಪಿಎಂಸಿ ಆವರಣದಲ್ಲಿ ತೆರಯಲಾದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT