ಸವದತ್ತಿ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ವಿವಿಧ ತಾಲ್ಲೂಕುಗಳ ಅಂಗನವಾಡಿ ಕೇಂದ್ರ ಸ್ಥಗಿತಗೊಳಿಸಿ ಬುಧವಾರ ಇಲ್ಲಿನ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಸಿಐಟಿಯು ಪ್ರಮುಖ ಫಕ್ರುಸಾಬ ನದಾಫ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಬೇಕೆಂದು ಗುಜರಾತ ಹೈಕೋರ್ಟ್ ಆದೇಶ ನೀಡಿದೆ. ರಾಜ್ಯ ಸರ್ಕಾರವೂ ಗುಜರಾತ ಮಾದರಿ ಜಾರಿಗೊಳಿಸಿ ಸದ್ಯ ಸಿ ಮತ್ತು ಡಿ ದರ್ಜೆ ನೌಕರರಿಗಿರುವ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ರಾಷ್ಟ್ರವ್ಯಾಪಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಸ್ಯೆಗಳಿಗೆ ಧ್ವನಿಯಾಗಿ ಸಿಐಟಿಯು ಕಾರ್ಯ ನಡೆಸಿದೆ. ಸಂಘಟನೆ ಬಲಿಷ್ಠವಾಗಿರದ ಕಾರಣ ದೌರ್ಜನ್ಯ ಅನುಭವಿಸುವಂತಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆರಂಭವಾಗಿ 2025 ಕ್ಕೆ 50 ವರ್ಷ ಪೂರ್ಣಗೊಳಿಸಲಿದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಸಾಕಷ್ಟು ಮಕ್ಕಳ ಸಾವು ನಿಯಂತ್ರಿಸಲು ಅಂಗನವಾಡಿ ಸಿಬ್ಬಂದಿ ಪಾತ್ರ ದೊಡ್ಡದಿದೆ. ಜೀವ ಭದ್ರತೆ, ನಿವೃತ್ತಿ ನಂತರದ ಸೌಲಭ್ಯ ಇಲ್ಲವೇ ಇಲ್ಲ. ಇದರಿಂದ ಲಾಭ ಪಡೆಯುವ ಸರ್ಕಾರ ಕಾರ್ಯಕರ್ತೆಯರನ್ನು ನೌಕರರೆಂದು ಪರಿಗಣಿಸುತ್ತಿಲ್ಲ. ಸರ್ಕಾರಿ ನೌಕರರಗಿಂತ ಹೆಚ್ಚು ಕೆಲಸ ಮಾಡುವ ಇವರು ಗೌರವಧನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜನ ಸಾಮಾನ್ಯರಿಗೆ ಸರ್ಕಾರದ ಯೋಜನೆ ತಲುಪಿಸುವ ಇವರಿಗೆ ಸಮರ್ಪಕ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಬಜೆಟ್ನಲ್ಲಿ ಐಸಿಡಿಎಸ್ ಯೋಜನೆಗೆ ಮೀಸಲಿಟ್ಟ ಅನುದಾನ ಕಡಿತಗೊಳಿಸಿದೆ. ಖಾಸಗೀಕರಣದತ್ತ ಅಂಗನವಾಡಿಗಳನ್ನು ಸೇರಿಸಬೇಕೆನ್ನುವ ಉದ್ದೇಶ ಇದೆ. ಸರ್ಕಾರಗಳ ನಡೆ ಮತ್ತು ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ಅನಿವಾರ್ಯ’ ಎಂದರು.

ಜಿಲ್ಲಾ ಗಟಕದ ಅಧ್ಯಕ್ಷೆ ದೊಡ್ಡವ್ವ ಪೂಜೇರ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಿರಂತರ’ ಎಂದು ತಿಳಿಸಿದರು.

ನೂರಾರು ಕಾರ್ಯಕರ್ತೆ ಮತ್ತು ಸಹಾಯಕಿಯರೊಂದಿಗೆ ಪ್ರತಿಭಟನಾ ರ್ಯಾಲಿ ಸಿಡಿಪಿಒ ಕಚೇರಿಗೆ ತಲುಪಿ ಮನವಿ ಸಲ್ಲಿಸಿದರು. ಶ್ರೀಕಾಂತ ಹಟ್ಟಿಹೊಳಿ, ಪಾರ್ವತಿ ಸಾಲಿಮಠ, ಸರಸ್ವತಿ ಮಾಳಶೆಟ್ಟಿ, ಸಿ.ಎನ್.ಮಗದುಮ, ಎಲ್.ಎಸ್. ದೇಸಾಯಿಪಟ್ಟಿ, ರತ್ನಾ ಸವದತ್ತಿ, ವಿದ್ಯಾ ಹಿರೇಮಠ, ಚಂದ್ರಕಲಾ ಹಿರೇಮಠ, ನಿಂಗವ್ವ ಮುರಗೋಡ ಹಾಗೂ ಪ್ರಮುಖ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.