ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಕೆ.ಹುಬ್ಬಳ್ಳಿ: ಮಲಪ್ರಭೆ ಒಡಲಿಗೆ ವಿಷಪ್ರಾಶನ..!

ಎಸ್.ಬಿ.ವಿಭೂತಿಮಠ
Published : 18 ಡಿಸೆಂಬರ್ 2023, 7:46 IST
Last Updated : 18 ಡಿಸೆಂಬರ್ 2023, 7:46 IST
ಫಾಲೋ ಮಾಡಿ
Comments
ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಎಸೆದ ತ್ಯಾಜ್ಯ
ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಎಸೆದ ತ್ಯಾಜ್ಯ
ಸ್ವಚ್ಛತೆಗೆ ಶ್ರಮಿಸುವ ಸಂತ
ಮಲಿನಗೊಂಡ ಮಲಪ್ರಭೆಯ ಅಳಲು ನೋಡಲಾಗದ ಮಧ್ವಾಚಾರ್ಯ ಬೆಳಗಾಂವರ್ ನದಿ ದಡದ ಸ್ವಚ್ಛತೆಗೆ ಶ್ರಮಿಸಿದ್ದಾರೆ. ‘ನದಿಯ ಸ್ವಚ್ಛತೆಗೆ ಶ್ರಮಿಸುವ ಸಂತ’ ಎಂದೇ ಅವರು ಹೆಸರುವಾಸಿ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಮಲಪ್ರಭಾ ನದಿಯಲ್ಲಿ ಭಕ್ತರು ಹಾಕಿದ ವಿವಿಧ ತ್ಯಾಜ್ಯ ತೆಗೆದು ನದಿ ಸ್ವಚ್ಛತೆ ಕಾಪಾಡಿದ್ದಾರೆ. ಧಾರ್ಮಿಕ ಸಭೆ ಸಮಾರಂಭ ಯಾತ್ರೆಗಳಲ್ಲಿ ಭಕ್ತಿಯ ಭಜನೆ ಮಾಡುವ ಇವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆದರೆ ಜನರು ಬದಲಾಗದ್ದರಿಂದ ಈಗ ಮಲಪ್ರಭೆಯ ಮಡಿಲು ಮತ್ತೆ ಮಲಿನಗೊಂಡಿದೆ.
ಸಂಸ್ಕರಣಾ ಘಟಕ ವಿಳಂಬ
ಮಲಪ್ರಭಾ ನದಿಗೆ ಸೇರುತ್ತಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಕೊಳಚೆ ನೀರು ತಡೆಗೆ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ (ಕೆಯುಡಬ್ಲ್ಯೂಎಸ್) ದಡಿ ಕೊಳಚೆ ನೀರು ಸಂಸ್ಕರಣಾ ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ಪಟ್ಟಣದ ಎರಡು ಕಡೆಗಳಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು ಕೊಳಚೆ ನೀರು ಶುದ್ಧೀಕರಿಸಿ ನದಿಗೆ ಹರಿಬಿಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಆದರೆ ಕಾಮಗಾರಿ ನಿಧಾನಗತಿಯಿಂದ ಸಾಗಿದ್ದು ಯೋಜನೆ ಅನುಷ್ಠಾನ ವಿಳಂಬಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT