ನಿಪ್ಪಾಣಿ: ‘ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ(ಬಹುರಾಜ್ಯ)ಯು ವಿವಿಧ ಹಂತಗಳಲ್ಲಿ ನ್ಯಾನೊ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದ್ದು, ಇದರಿಂದ ರೈತರು ಕಡಿಮೆ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಉತ್ಪಾದಿಸಬಹುದು. ಅಲ್ಲದೆ ರೈತರಿಗೆ ಹಾಗೂ ಸದಸ್ಯರಿಗೆ ವಿವಿಧ ನ್ಯಾನೋ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು' ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ವೇದಗಂಗಾ ರೈತ ಉತ್ಪಾದಕರ ಒಕ್ಕೂಟ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಡ್ರೋನ್ ಮೂಲಕ ಔಷಧ ಸಿಂಪಡಣೆ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರ್ಖಾನೆಗಳು ಹಾಗೂ ರೈತರ ಅಭಿವೃದ್ಧಿಗೆ ಎಲ್ಲ ಹಂತಗಳಲ್ಲಿ ಶ್ರಮಿಸಲಾಗುತ್ತಿದೆ. ಕಾರ್ಖಾನೆಯ ಆರ್ಥಿಕ ಸ್ಥಿತಿಯು ಸರಿ ಇಲ್ಲದಿದ್ದರೂ, ಕಾರ್ಖಾನೆಯು ಇಥೆನಾಲ್ ಮೂಲಕ ವರ್ಷವಿಡೀ ಆದಾಯದ ಮೂಲವನ್ನು ಸೃಷ್ಟಿಸಿದೆ. ಕಾರ್ಮಿಕ ವೇತನ ಸೇರಿದಂತೆ ನಿಯಮಿತ ವೆಚ್ಚಗಳನ್ನು ಅದರ ಮೂಲಕ ಸಂದಾಯವಾಗುತ್ತವೆ. ಮುಂಬರುವ ಹಂಗಾಮಿನಲ್ಲಿ ಪ್ರತಿದಿನ 8500 ಟನ್ ಕಬ್ಬು ಅರೆಯುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ’ ಎಂದರು.

ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಮಾತನಾಡಿ, ‘ಇನ್ನು ಮುಂದೆ ಡ್ರೋನ್ ಯಂತ್ರಗಳ ಮೂಲಕ ಔಷಧ ಸಿಂಪಡಿಸುವ ಸೇವೆ ರಿಯಾಯಿತಿ ದರದಲ್ಲಿ ದೊರೆಯಲಿದೆ' ಎಂದರು.

ಕೃಷಿ ಅಧಿಕಾರಿ ಮಂಜುನಾಥ ಕಿತ್ತೂರು ಮಾತನಾಡಿ, ‘ಸಕ್ಕರೆ ಕಾರ್ಖಾನೆ, ವೇದಗಂಗಾ ಸಂಘದ ವತಿಯಿಂದ ನಡೆಯುವ ಕೃಷಿ ಚಟುವಟಿಕೆಗಳಿಗೆ ಇಲಾಖೆ ಸದಾ ಬೆಂಬಲ ನೀಡಲಿದೆ’ ಎಂದರು.

ಉಪಾಧ್ಯಕ್ಷ ಪವನ ಪಾಟೀಲ, ಕೃಷಿ ಅಧಿಕಾರಿ ನಾಮದೇವ ಬನ್ನೆ, ಪ್ರವೀಣ ಮಾನೆ ಮಾತನಾಡಿದರು. ಸಿದ್ದು ನರಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಡ್ರೋನ್ಗಳಿಂದ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ಸಮಿತ ಸಾಸನೆ, ಮಹಾಲಿಂಗ ಕೋಠಿವಾಲೆ, ಪ್ರಕಾಶ ಶಿಂಧೆ, ಜಯವಂತ ಭಾಟಲೆ, ರಾಜು ಗುಂಡೇಶಾ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ ಜಂಗಟೆ, ಸುಹಾಸ ಗೂಗೆ, ಬಾಳಾಸಾಹೇಬ ಕದಮ ಹಾಗೂ ಗಣ್ಯರು ಉಪಸ್ಥಿತರಿದ್ದರು. ಶ್ರೀಕಾಂತ ಬನ್ನೆ ಸ್ವಾಗತಿಸಿದರು.

ಸಾಮಾನ್ಯ ಸಭೆ:

ಕಾರ್ಖಾನೆಯ ವಾರ್ಷಿಕ ಸಾಮಾನ್ಯ ಸಭೆಯು ಸೆ.15 ರಂದು ನಡೆಯಲಿದೆ. ಒಂದು ವರ್ಷಕ್ಕಾಗಿ ಆಯ್ಕೆಯಾದ ನಾಲ್ವರು ನಿರ್ದೇಶಕರ ಅವಧಿ ಮುಗಿಯುತ್ತಿದ್ದು ವಾರ್ಷಿಕ ಸಭೆಯಲ್ಲಿ ಪ್ರಕಟಿಸಲಾಗುವುದು. ಅವರಲ್ಲಿ ಮಹಾಲಿಂಗ ಕೋಠಿವಾಲೆ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.