ಅಥಣಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರದಿಂದ ₹5 ಕೋಟಿ ಅನುದಾನಕ್ಕೆ ಮಂಜೂರಾತಿ ಪಡೆದುಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ₹5 ಕೋಟಿ ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಕೈಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿನ ಈದ್ಗಾ ಮೈದಾನದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಬೇಡಿಕೆಗಳಿಗೆ ಭರವಸೆ ನೀಡಿದಂತೆ ₹5 ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಸುಧಾರಣೆ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಗೆ ಈ ಅನುದಾನ ಬಳಸಲಾಗುವುದು. ಮೊದಲ ಹಂತವಾಗಿ 9 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಪುರಸಭೆ ಸದಸ್ಯರು ಈ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗಳಾಗುವಂತೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಅಲ್ಪಸಂಖ್ಯಾತರ ನಿಧಿಯಿಂದ ₹5 ಕೋಟಿ ವೆಚ್ಚದ ಕಾಮಗಾರಿಯನ್ನು ಸರ್ಕಾರದ ಏಜೆನ್ಸಿಯಾಗಿರುವ ಕೆ.ಆರ್‌ಡಿಸಿಎಲ್ ಸಂಸ್ಥೆಗೆ ವಹಿಸಲಾಗಿದ್ದು, ಎರಡು ದಿನದಲ್ಲಿ ರಮಜಾನ ತಿಂಗಳ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಈದ್ಗಾ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ರಂಜಾನ್ ತಿಂಗಳ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಮುಸ್ಲಿಂ ಸಮಾಜದ ಧರ್ಮ ಗುರು ಮುಫ್ತಿ ಹಬಿಬುಲ್ಲಾ ಕಾಶ್ಮಿ ಮಾತನಾಡಿದರು. ಅಂಜುಮನ್ ಸಂಸ್ಥೆಯ ಅದ್ಯಕ್ಷ ಸಯ್ಯದ್ ಅಮಿನ ಗದ್ಯಾಳ, ಮುಖಂಡರಾದ ಅಸ್ಲಂ ನಾಲಬಂದ, ಅತೀಕ ಮೋಮಿನ್ , ಆರೀಪ್ ನಾಲಬಂದ , ಆಸೀಪ ನಾಲಬಂದ , ರಾಜು ಬುಲಬುಲೆ, ಸಂತೋಷ ಸಾವಡಕರ, ರಾವಸಾಬ ಐಹೊಳೆ, ಮಲ್ಲು ಹುದ್ದಾರ್, ಹಾಜಿ ಬಾಬು ಗದ್ಯಾಳ್, ಹಾಜಿ ಬಾಬು ಮುಲ್ಲಾ, ಹಾಜಿ ಅಕ್ಬರ್ ಮುಲ್ಲಾ, ಹಾಜಿ ಶಫಿ ಮುಲ್ಲಾ, ರಿಯಾಜ್ ಸನದಿ, ಅಬ್ದುಲ ಅಜೀಜ್ ಮುಲ್ಲಾ, ಆಬಿದ ಮಾಸ್ಟರ್, ಇಲಿಯಾಸ್ ಹಿಪ್ಪರಗಿ, ಬಾಬು ಖೆಮಲಾಪೂರ್, ಐ.ಜಿ ಬಿರಾದಾರ್, ಇರ್ಷಾದ್ ಮನಗೂಳಿ, ಸಯ್ಯದ ಗಡ್ಡೆಕರ, ಸಲಾಂ ಕಲ್ಲಿ, ಅತಿಕ್ ಮೊಮೀನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.