ಕಾಗವಾಡ: ಪಟ್ಟಣದಿಂದ ಮಿರಜ್ ರಸ್ತೆಯ ಹೆಸ್ಕಾಂ ಕಚೇರಿ ಸಮೀಪ ಕಬ್ಬು ತುಂಬಿದ ಟ್ಯ್ರಾಕ್ಟರ್ ಟ್ರೇಲರ್ ಸೋಮವಾರ ಮಧ್ಯಾಹ್ನ ಪಲ್ಟಿಯಾದ ಪರಿಣಾಮ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಯಿತು.

ನೆರೆಯ ಮಹಾರಾಷ್ಟ್ರದ ಮಿರಜ್ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಚಾರ ವಿಳಂಬವಾದ ಹಿನ್ನೆಲೆ ರೋಗಿಗಳು, ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕರು ನಿಲ್ದಾಣದಿಂದ ಹೊರಬರಲು ಆಗದೆ ತೊಂದರೆ ಅನುಭವಿಸಿದರು. ಕಾಗವಾಡ ಠಾಣೆಯ ಪೊಲೀಸರು ಬಿದ್ದ ಟ್ರೇಲರ್ ಹಾಗೂ ಕಬ್ಬನ್ನು ಜೆಸಿಬಿ ಸಾಹಾಯದಿಂದ ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.