ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಮಹಿಳೆಯನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿದ್ದ ಸ್ಥಳ ಪರಿಶೀಲಿಸಿದರು. ಈ ವೇಳೆ ಸಚಿವರ ಕಾಲಿಗೆ ಬಿದ್ದ ಯುವಕನ ಅಜ್ಜಿ ‘ನಮಗೇನೂ ಗೊತ್ತಿಲ್ಲ, ನಮ್ಮನ್ನು ಕಾಪಾಡಿ’ ಎಂದು ಕಾಲಿಗೆ ಬಿದ್ದು ಬೇಡಿಕೊಂಡರು.

ಗ್ರಾಮದ ಯುವಕ ಯುವತಿಯರಿಬ್ಬರು ಪ್ರೀತಿಸಿ, ಭಾನುವಾರ ರಾತ್ರಿ ಓಡಿ ಹೋಗಿದ್ದಾರೆ. ಸಿಟ್ಟಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದರು. ಈ ಹಿನ್ನೆಲೆಯಲ್ಲಿ ಊರಿಗೆ ಬಂದ ಡಾ.ಪರಮೇಶ್ವರ, ಮಹಿಳೆಯ ಮನೆಗೆ ಆದ ಹಾಗೂ ಹಲ್ಲೆ ಮಾಡಿದ ಸ್ಥಳಗಳನ್ನು ಪರಿಶೀಲಿಸಿದರು. ಮನೆಯ ಮುಂದೆ ಕಣ್ಣೀರು ಹಾಕುತ್ತ ಕುಳಿತಿದ್ದ ಯುವಕನ ಅಜ್ಜಿಗೆ ಸಮಾಧಾನ ಹೇಳಿದರು.

ಸಚಿವರ ಮುಂದೆ ಗೋಳು ತೋಡಿಕೊಂಡ ಅಜ್ಜಿ, ‘ನಮಗೆ ಈ ವಿಷಯ ಏನೂ ಗೊತ್ತಿಲ್ಲಪ್ಪ. ಮೊಮ್ಮಗ ನಿನ್ನೆ ಮನೆಯಲ್ಲೇ ಮಲಗಿದ್ದ. ಯಾವಾಗ ಆ ಹುಡುಗಿ ಕರೆದಳೋ ಯಾವಾಗ ಹೋದನೋ ಗೊತ್ತಿಲ್ಲ. ಆಕೆಯ ಮನೆಯವರು ಬಂದು ಏಕಾಏಕಿ ಹೊಡೆಯಲು ಶುರು ಮಾಡಿದರು. ನಮಗೆ ಜೀವ ಭಯ ಉಂಟಾಗಿದೆ. ನಮ್ಮನ್ನು ಕಾಪಾಡಿ ತಂದೆ’ ಎನ್ನುತ್ತ ಅಜ್ಜಿ ಪರಮೇಶ್ವರ ಅವರ ಕಾಲಿಗೆ ಬಿದ್ದರು.
.ಪ್ರೀತಿಸಿ ಓಡಿಹೋದ ಜೋಡಿ: ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಥಳಿತ.ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ಆರೋಪಿಗಳ ವಿರುದ್ಧ ಕ್ರಮ – ಸಿದ್ದರಾಮಯ್ಯ .ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: 7 ಮಂದಿ ಬಂಧನ– ಡಾ.ಜಿ.ಪರಮೇಶ್ವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.