ಬೆಂಗಳೂರು: ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಸುತ್ತಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಐವರು ಮಹಿಳೆಯರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ರಾಧಾ ಅಲಿಯಾಸ್ ಉಷಾ (27), ರಾಶಿಪೊಗುಲಾ ನಂದಿನಿ (27), ಶಂಕ್ರಮ್ಮ (26), ಚಿಂತಾಮಣಿ ತಾಲ್ಲೂಕಿನ ಕರಿಯಪ್ಪಲ್ಲಿಯ ಸುಜಾತಾ (36) ಹಾಗೂ ಮುರುಗುಮುಲ್ಲಾ ಗ್ರಾಮದ ಶಾಂತಮ್ಮ (45) ಬಂಧಿತರು. ಇವರಿಂದ ₹ 30 ಲಕ್ಷ ಮೌಲ್ಯದ 120 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೆ. 7ರಂದು ಬಸ್‌ನಲ್ಲಿ ಹೊರಟಿದ್ದ ಪ್ರಯಾಣಿಕರೊಬ್ಬರ ಮೊಬೈಲ್ ಕಳ್ಳತನ ಆಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದರು.

‘ಬಸ್ ನಿಲ್ದಾಣ, ಮಾರುಕಟ್ಟೆ, ಜಾತ್ರೆ, ಸಭೆ–ಸಮಾರಂಭ ಸೇರಿ ಜನರು ಹೆಚ್ಚು ಸೇರುತ್ತಿದ್ದ ಸ್ಥಳಗಳಿಗೆ ಆರೋಪಿಗಳು ಹೋಗುತ್ತಿದ್ದರು. ಬ್ಯಾಗ್ ಹಾಗೂ ಜೇಬಿನಲ್ಲಿರುತ್ತಿದ್ದ ಮೊಬೈಲ್‌ಗಳನ್ನು ಕದಿಯುತ್ತಿದ್ದರು. ನಂತರ, ಬೆಂಗಳೂರಿನ ಮನೆಯೊಂದರಲ್ಲಿ ಮೊಬೈಲ್ ಸಂಗ್ರಹಿಸಿಡುತ್ತಿದ್ದರು. ಆಂಧ್ರಪ್ರದೇಶದ ವ್ಯಕ್ತಿಯೊಬ್ಬರ ಮೂಲಕ ಮೊಬೈಲ್ ಮಾರಿ, ಹಣ ಸಂಪಾದಿಸುತ್ತಿದ್ದರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.