ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ₹467 ಕೋಟಿ ಪಾವತಿ ಮಾಡಲು ವಲಯಗಳ ಮುಖ್ಯ ಎಂಜಿನಿಯರ್ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ 2023ರ ಅಕ್ಟೋಬರ್ 12ರಿಂದ ನವೆಂಬರ್ 23ರವರೆಗೆ ಸಲ್ಲಿಸಲಾಗಿರುವ ಬಿಲ್ಗಳಿಗೆ ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಈ ಬಾಬ್ತಿನಲ್ಲಿ ಕೇಂದ್ರ ಹಾಗೂ

ಎಂಟೂ ವಲಯಗಳಿಗೆ ₹337.23 ಕೋಟಿ ಹಣವನ್ನು ಹಣಕಾಸು ವಿಭಾಗ ವಿಶೇಷ ಆಯುಕ್ತರು ವಲಯ ಎಂಜಿನಿಯರ್ಗಳ ಖಾತೆಗೆ ಜೂನ್ 13 ವರ್ಗಾಯಿಸಿದ್ದಾರೆ. ಈ ಮೊತ್ತ ಪಾವತಿಯ ನಂತರವೂ ಇನ್ನೂ ₹1,500 ಕೋಟಿ ಬಾಕಿ ಉಳಿಯುತ್ತದೆ.

ಬಿಬಿಎಂಪಿ ಅನುದಾನದಲ್ಲಿನಿರ್ವಹಿಸಲಾಗಿರುವ ಕಾಮಗಾರಿಗಳಿಗೆ 2022ರ ಜೂನ್ನಿಂದ ಆಗಸ್ಟ್ ವರೆಗಿನ ಬಿಲ್ ಪಾವತಿಗೆ ₹130.11 ಕೋಟಿ ಹಣ ಬಿಡುಗಡೆಮಾಡಲಾಗಿದೆ.

ಪ್ರತಿ ಬಿಲ್ನ ಶೇ 75ರಷ್ಟನ್ನು ಮಾತ್ರ ಜೇಷ್ಠತೆ ಆಧಾರದಲ್ಲಿ ಪಾವತಿಸಲಾಗುತ್ತದೆ. ಇನ್ನೂ 22 ತಿಂಗಳ ಬಿಲ್ ಬಾಕಿ ಉಳಿದಿದ್ದು, ಅದರ ಮೊತ್ತ ಸುಮಾರು ₹1700 ಕೋಟಿಯಷ್ಟಿದೆ.

‘ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಗಿತ್ತು.

ಇದೀಗ ₹467 ಕೋಟಿ ಬಿಡುಗಡೆಯಾಗಿದ್ದು, ಉಳಿದ ಹಣ ಶೀಘ್ರ ಬಿಡುಗಡೆಯಾಗುವ ಭರವಸೆ ಇದೆ’ ಎಂದು ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.