ದಾಬಸ್ ಪೇಟೆ: ಪರವಾನಗಿ ಪಡೆಯದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ₹30 ಲಕ್ಷ ಬೆಲೆಯ ಮರದ ತುಂಡುಗಳನ್ನು ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್ ಎಸ್. ಮತ್ತು ಸಿಬ್ಬಂದಿ ಯಂಟಗಾನಹಳ್ಳಿ ಟೋಲ್ ಬಳಿ ಗುರುವಾರ ರಾತ್ರಿ, ಕುಣಿಗಲ್ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ಯಾಂಟರ್ ವಾಹನವನ್ನು ಪರಿಶೀಲಿಸಿದಾಗ ಬೀಟೆ, ಹಲಸು, ಹೊನ್ನೆಮರದ ತುಂಡಗಳು ಪತ್ತೆಯಾಗಿದ್ದವು.

ಸಕಲೇಶಪುರದಿಂದ ತಂದಿರುವುದಾಗಿ ಚಾಲಕ ಕುಮಾರ್ ಟಿ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಲಸು, ಹೊನ್ನೆ ಮರಗಳಿಗೆ ಮಾತ್ರ ಅನುಮತಿ ಪಡೆದು, ಅವುಗಳೊಂದಿಗೆ ಅನುಮತಿ ಇಲ್ಲದೇ ಬೀಟೆ ಮರದ ತುಂಡುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್.ಎಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.