ಬೆಂಗಳೂರು:ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಸ್ಥಳೀಯ ಸಂಸ್ಥೆಗಳ ಸದನ ಸಮಿತಿಯು ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಹಾಗೂ ಹುಳಿಮಾವು ಕೆರೆ ಪ್ರದೇಶವನ್ನು ಗುರುವಾರ ಪರಿಶೀಲಿಸಿ, ಜಲಕಾಯದ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚಿಸಿತು.

‘ಮೂರು ವರ್ಷಗಳ ಹಿಂದೆಯೂಈ ಕೆರೆಗಳ ಸರ್ವೆ ನಡೆಸಲಾಗಿದೆ. ಈವರೆಗೆ ಒತ್ತುವರಿದಾರರ ಮೇಲೆ ಕ್ರಮ ಕೈಗೊಂಡಿಲ್ಲ. ಕೆರೆಗಳ ಪಕ್ಕದಲ್ಲಿಯೇ ಎತ್ತರದ ಕಟ್ಟಡಗಳಿವೆ. ಕೆಲವರು ಜಲಕಾಯದ ಮೀಸಲು ಪ್ರದೇಶವನ್ನೂ ಅತಿಕ್ರಮಣ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಧಿಕಾರಿಗಳಿಗೆ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಸಮೀಕ್ಷೆ ವರದಿಯ ಪ್ರಕಾರ ಹುಳಿಮಾವು ಕೆರೆಯ ಅಧಿಕ ಪ್ರದೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಒತ್ತುವರಿ ಮಾಡಿದೆ. ಸುಮಾರು 18 ಎಕರೆ 30 ಗುಂಟೆ ಒತ್ತುವರಿ ಮಾಡಿದೆ.

ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಪ್ರದೇಶದ ಮೇಲೆ ಕಟ್ಟಡ ಅವಶೇಷಗಳನ್ನು ಎಸೆದಿರುವ ಬಗ್ಗೆ ದೂರು ದಾಖಲಿಸಿದರೂ ಪೊಲೀಸರು ಈವರೆಗೂ ಎಫ್‌ಐಆರ್ ದಾಖಲಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.