ಬೆಂಗಳೂರು: ‘ಧೂಮಪಾನ, ಮದ್ಯಪಾನ, ಡ್ರಗ್ ವ್ಯಸನದಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ತಿಳಿಸಿದೆ.

ವಿಶ್ವಪಾರ್ಶ್ವವಾಯು ದಿನದ ಪ್ರಯುಕ್ತ ಸಂಸ್ಥೆಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ದೇಶದಲ್ಲಿ ವಾರ್ಷಿಕ ಪಾರ್ಶ್ವವಾಯು ಪೀಡಿತರಲ್ಲಿ ಶೇ 14ರಷ್ಟು ಮಂದಿ ಯುವಜನರಾಗಿದ್ದಾರೆ. ಪಾರ್ಶ್ವವಾಯು ಸಮಸ್ಯೆಯು ಪ್ರಮುಖ ಮರಣ ಕಾರಣದಲ್ಲಿ ನಾಲ್ಕನೇ ಸ್ಥಾನ ಹಾಗೂ ಅಂಗವಿಕಲತೆಯಲ್ಲಿ ಐದನೇ ಸ್ಥಾನದಲ್ಲಿದೆ. ಒಂದು ಲಕ್ಷ ಜನರಲ್ಲಿ 119 ರಿಂದ 145 ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವಾರ್ಷಿಕ 1 ಲಕ್ಷ ಪಾರ್ಶ್ವವಾಯು ರೋಗಿಗಳ ಪೈಕಿ 73 ಜನರು ಮರಣ ಹೊಂದುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದೆ.

‘ಪಾರ್ಶ್ವವಾಯು ಆದಾಗ ಸಮಯಪ್ರಜ್ಞೆ ಬಹಳ ಮುಖ್ಯ. ಆರೈಕೆ ಹಾಗೂ ಸರಿಯಾದ ಸಮಯಕ್ಕೆ, ಸಮರ್ಪಕವಾದ ಚಿಕಿತ್ಸೆ ಸಿಕ್ಕರೆ ವ್ಯಕ್ತಿ ಬೇಗ ಗುಣಮುಖವಾಗಲು ಸಾಧ್ಯ. ಮಧುಮೇಹ, ಧೂಮಪಾನ, ಮದ್ಯಪಾನ, ಕಳಪೆ ಆಹಾರ ಪದ್ಧತಿ, ಕಡಿಮೆ ದೈಹಿಕ ಚಟುವಟಿಕೆ, ಒತ್ತಡ, ಖಿನ್ನತೆ ವಿವಿಧ ಕಾರಣಗಳಿಂದ ಪಾರ್ಶ್ವವಾಯು ಸಂಭವಿಸುತ್ತಿದೆ’ ಎಂದು ಹೇಳಿದೆ.

‘ತೋಳಿನ ದೌರ್ಬಲ್ಯ, ಮಾತು ತೊದಲುವಿಕೆ ಸೇರಿ ವಿವಿಧ ಲಕ್ಷಣಗಳು ಕಾಣಿಸಿಕೊಂಡಾಗ ತುರ್ತುಚಿಕಿತ್ಸೆ ಒದಗಿಸಬೇಕು. ಸಂಸ್ಥೆಯಲ್ಲಿ ಪಾರ್ಶ್ವವಾಯು ಪೀಡಿತರ ಆರೈಕೆಗೆ 24 ಹಾಸಿಗೆಗಳನ್ನು ಮೀಸಲಿಡಲಾಗಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.