ಬೆಂಗಳೂರು: ಕಳೆದ ವರ್ಷಕ್ಕಿಂತ ಈ ಬಾರಿ ಜನರ ಸ್ಪಂದನೆ ಚೆನ್ನಾಗಿದೆ. ವ್ಯಾಪಾರವೂ ಪರವಾಗಿಲ್ಲ.. ಶೌಚಾಲಯ, ಕಸದಬುಟ್ಟಿ ಕೊರತೆ ಇದೆ. ರೈತರ ಸಂಸ್ಥೆಗಳಿಗೆ ಆದ್ಯತೆ ಮೇಲೆ ಮಳಿಗೆ ನೀಡುವ ವ್ಯವಸ್ಥೆಯಾಗಬೇಕಿತ್ತು.

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾಗವಹಿಸಿರುವ ವಿವಿಧ ಸಂಘಟನೆಗಳ ಅಭಿಪ್ರಾಯಗಳು.

‘ಗುರುವಾರ ಮಳೆಯಿಂದಾಗಿ ಸ್ವಲ್ಪ ಜನರ ಪ್ರತಿಕ್ರಿಯೆ ಕಡಿಮೆ ಇತ್ತು. ಆದರೆ, ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದಲೇ ಜನ ಮಳಿಗೆಗಳತ್ತ ಬರುತ್ತಿದ್ದಾರೆ. ವ್ಯಾಪಾರವೂ ಚೆನ್ನಾಗಿದೆ. ಸ್ವಸಹಾಯ ಸಂಘಗಳಿಗೆ ಇನ್ನಷ್ಟು ಪ್ರತ್ಯೇಕ ಮಳಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು. ಇವರೊಂದಿಗೆ ಮೂರು ಸಂಘಗಳು ಸೇರಿ ಒಂದೇ ಮಳಿಗೆಯಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

‘ಮೇಳದ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಜನರು ನಾಟಿ ಬಿತ್ತನೆ ಬೀಜಗಳನ್ನು ಹುಡುಕಿಕೊಂಡು ಬಂದು ಖರೀದಿಸುತ್ತಿದ್ದಾರೆ. ತರಕಾರಿ ಬೀಜಗಳಿಗೆ ಉತ್ತಮ ಬೇಡಿಕೆ ಇದೆ. ಗುರುವಾರಕ್ಕಿಂತ ಶುಕ್ರವಾರ ಜನರ ಪ್ರತಿಕ್ರಿಯೆ ಚೆನ್ನಾಗಿದೆ’ ಎಂದರು ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿಯ ಮನು. ಚಾಮರಾಜನಗರದ ಆಕೃತಿ ಎಕೋಫ್ರೆಂಡ್ಲಿ ಎಂಟರ್ಪ್ರೈಸಸ್ನ ವರ್ಷಾ ‘ಪ್ರತಿ ವರ್ಷದಂತೆ ಈ ವರ್ಷವೂ ವ್ಯವಸ್ಥೆ ಚೆನ್ನಾಗಿದೆ’ ಎಂದು ಮನು ಮಾತಿಗೆ ದನಿಗೂಡಿಸಿದರು.

‘ಮೇಳದ ಅಂಗಳದಲ್ಲಿ ಶೌಚಾಲಯ, ಕಸದ ಬುಟ್ಟಿ ಕೊರತೆ ಇದೆ. ಇನ್ನೊಂದಿಷ್ಟು ಶೌಚಾಲಯಗಳ ಸೌಲಭ್ಯ ಕಲ್ಪಿಸಬೇಕಿತ್ತು’ ಎಂದು ಜನಧಾನ್ಯ ರೈತ ಉತ್ಪಾದಕ ಸಂಸ್ಥೆಯ ರಾಜೇಶ್ ಸಲಹೆ ನೀಡಿದರು.

‘ಮಳಿಗೆಗಳಿಗೆ ದುಬಾರಿ ಶುಲ್ಕವಿದೆ. ಆ ಶುಲ್ಕವನ್ನು ದೊಡ್ಡ ದೊಡ್ಡ ಕಂಪನಿಗಳು ಪಾವತಿಸಬಹುದೇನೋ, ಆದರೆ, ಸಣ್ಣ ಸಣ್ಣ ರೈತ ಉತ್ಪಾದಕ ಸಂಸ್ಥೆಗಳಿಗೆ ತುಂಬಾ ಹೊರೆಯಾಗುತ್ತದೆ’ ಎಂದು ಕೆಲವು ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸಿದರು.

'ಕೃಷಿಯೇತರ ಹಾಗೂ ವಾಣಿಜ್ಯ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಮುಂಭಾಗದಲ್ಲಿ ಮಳಿಗೆಗಳನ್ನು ಕೊಡುತ್ತಾರೆ. ಸರ್ಕಾರದ ಇಲಾಖೆಗಳು ಪ್ರಾಯೋಜಿಸುವ ಸ್ವಸಹಾಯ ಸಂಘಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ ಕೊನೆ ಭಾಗದಲ್ಲಿ ಮಳಿಗೆ ಕೊಡುತ್ತಾರೆ. ಇದರಿಂದ ರೈತರ ಉತ್ಪನ್ನಗಳು ವ್ಯಾಪಾರವಾಗುವುದು ಕಷ್ಟ. ಇದರ ಬಗ್ಗೆ ಗಮನ ಹರಿಸಬೇಕು' ಎಂದು ಧಾರವಾಡದ ದೇವಧಾನ್ಯ ರೈತ ಉತ್ಪಾದಕ ಸಂಸ್ಥೆಯ ಸೂರ್ಯಕಾಂತ್ ಅಭಿಪ್ರಾಯಪಟ್ಟರು.

ಪ್ರತಿ ವರ್ಷ ಮೇಳಕ್ಕೆ ಬರುತ್ತೇನೆ. ಈ ವರ್ಷ ಮೇಳದಲ್ಲಿ ಡಿಜಿಟಲ್ ಕೃಷಿಯ ಹಲವು ವಿಶೇಷಗಳನ್ನು ಗಮನಿಸಿದೆ. ಕೃಷಿಗೆ ಸಂಬಂಧಿಸಿದ ವಿಭಿನ್ನ ವಿಷಯಗಳಿವೆ.
ಚಂದ್ರಶೇಖರ್, ಮಧುಗಿರಿ

ಮಾಹಿತಿ ತಿಳಿಯಲೆಂದೇ ಪ್ರತಿ ವರ್ಷ ಮೇಳಕ್ಕೆ ಬರುತ್ತೇನೆ. ಈ ಬಾರಿ ಹಣ್ಣಿನ ಬೆಳೆಗೆ ತಗಲುವ ಕೀಟ ನಿಯಂತ್ರಣದ ಬಗ್ಗೆ ಮಾಹಿತಿ ಸಿಕ್ಕಿದೆ. ಮೇಳದ ವ್ಯವಸ್ಥೆ ಚೆನ್ನಾಗಿದೆ..
ನಾಗರಾಜ ಎಚ್.ಆರ್. ಹೇರೂರು, ಕುಣಿಗಲ್ ತಾಲ್ಲೂಕು

ಕಳೆದ ವರ್ಷ ಪ್ರದರ್ಶನಕ್ಕಾಗಿ ನಮ್ಮ ರೈತರು ಬೆಳೆದ ಉತ್ಪನ್ನಗಳನ್ನು ಮೇಳಕ್ಕೆ ತಂದಿದ್ದೆವು. ಈ ಬಾರಿ ಮಾರಾಟಕ್ಕೆ ಇಟ್ಟಿದ್ದೇವೆ. ವ್ಯಾಪಾರ ಚೆನ್ನಾಗಿದೆ.
ಸೂರ್ಯಕಾಂತ್, ದೇವಧಾನ್ಯ ರೈತ ಉತ್ಪಾದಕ ಕಂಪನಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.