ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಳ್ಳದ ಕರಡು ತಡೆಗೆ ಆಗ್ರಹ

Published 21 ಜುಲೈ 2024, 15:57 IST
Last Updated 21 ಜುಲೈ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಳ್ಳದೇ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿ ಬದಲಾವಣೆ ತರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿರುವ ಕರುಡನ್ನು ತಕ್ಷಣವೇ ತಡೆ ಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಕಾನೂನು ಸಚಿವರನ್ನು ಆಗ್ರಹಿಸಿವೆ.

ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವು ಶತಮಾನಗಳಿಂದ ಸಾಮಾಜಿಕ ಬಹಿಷ್ಕಾರ, ಶೋಷಣೆ, ಹಿಂಸೆಗಳನ್ನು ಅನುಭವಿಸುತ್ತಾ ಬಂದಿದೆ. ಈ ಸಮುದಾಯದ ಪರವಾಗಿ ಹಲವು ಮಹತ್ವದ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ನೀಡಿದ್ದರೂ ಈವರೆಗೆ ಅನುಷ್ಠಾನವಾಗಿಲ್ಲ ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಅಕ್ಕೈ ಪದ್ಮಶಾಲಿ, ಮಾಯಾ ಎಸ್.ಆರ್. ನಾಯಕ್, ಪ್ರಕಾಶ್ ರಾಜ್, ಲಕ್ಷ್ಮಣ್ (ಮಾಳವಿಕಾ), ರಕ್ಷಿತಾ, ಪೃಥ್ವಿ, ಭಗತ್ (ಆದಿತ್ಯ) ಬಂಡಗೆ, ಪೆದ್ದಣ್ಣ ವಿ.ಕೋನಾಪುರ್, ಕಾವ್ಯಾ (ಭೀಮಯ್ಯ), ಸಮೀರ್ ಎಂ. ಕರ್ಜಗಿ, ಮಹಮ್ಮದ್ ಸೈಫುಲ್ಲಾ (ಪ್ಯಾರೂದಾ), ಸಂಜೀವನಿ (ಸಂಜೀವ), ಕೃಷ್ಣಮೂರ್ತಿ(ಕವಿತಾ) ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಮುದಾಯದ ಬಗ್ಗೆ ಚರ್ಚಿಸಲು, ಕಾನೂನಿನ ಅಡೆತಡೆಗಳ ಬಗ್ಗೆ ವಿಮರ್ಶೆ ನಡೆಸಲು, ಸಮುದಾಯದ ಜೀವನ ಶೈಲಿ ಹಾಗೂ ಇನ್ನಿತರ ಸೂಕ್ಷ್ಮ ವಿಚಾರಗಳ ಕುರಿತು ತಿಳಿಯಲು ಕಾನೂನು ಸಚಿವ ಎಚ್‌.ಕೆ. ಪಾಟೀಲ ಅವರು ತುರ್ತಾಗಿ ಸಭೆ ನಿಗದಿಪಡಿಸಬೇಕು. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಧ್ವನಿಯನ್ನು ಆಲಿಸಬೇಕು. ಈ ಸಮುದಾಯವನ್ನು ಕಾಪಾಡುವ ಅಂಶಗಳನ್ನು ಸೇರಿಸಿದ ಬಳಿಕವಷ್ಟೇ ಕೇಂದ್ರ ಸರ್ಕಾರಕ್ಕೆ ಕರಡು ಕಳುಹಿಸಿಕೊಡಬೇಕು ಎಂದು ಕಾನೂನು ಸಚಿವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT