ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಐದು ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ಆಹಾರ ನೀಡುವ ಎಲ್ಲಾ ತಂಡಗಳೂಂದಿಗೆ ಪರಿಶೀಲನಾ ಸಭೆ ನಡೆಸಿ, ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಯೋಜನೆಯನ್ನು ರೂಪಿಸಲಾಯಿತು. ಪಾಲಿಕೆಯ ಪಶು ಸಂಗೋಪನಾ ಇಲಾಖೆಯು ಪ್ರಾಣಿ ಪ್ರಿಯರ ಸಹಯೋಗದೊಂದಿಗೆ ಸುಮಾರು ಒಂದು ಸಾವಿರ ನಾಯಿಗಳಿಗೆ ಆಹಾರವನ್ನು ನೀಡುವ ಗುರಿ ಹೊಂದಿದೆ ಎಂದರು.

‘ನಗರದ ಎಲ್ಲ ನಾಗರಿಕರು ಪ್ರತಿದಿನ ಒಳ್ಳೆಯ ಆಹಾರವನ್ನು ಒಂದು ಬಟ್ಟಲಿನಲ್ಲಿ ತಮ್ಮ ಮನೆಯ ಮುಂದಿರುವ ನಾಯಿಗೆ ನೀಡಿ, ಕೈಲಾದಷ್ಟು ಸಹಾನುಭೂತಿ ತೋರಬೇಕು. ಇದರಿಂದ ಎಷ್ಟೋ ನಾಯಿಗಳಿಗೆ ಆಹಾರ ಸಿಗುವಂತಾಗುತ್ತದೆ. ಪ್ರಾಣಿಗಳ ಆಕ್ರಮಣಕಾರಿ ಸ್ವಭಾವವನ್ನು ನಿಯಂತ್ರಿಸಲು ಆಹಾರವು ಬಹಳ ಮುಖ್ಯ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.

ಬೊಮ್ಮನಹಳ್ಳಿ ವಲಯದ ಕಬಾಬ್ ಮಹಲ್, ಕೃಷ್ಣಂ, ಎಂಪೈರ್ ಮತ್ತು ಕೆಎಫ್ಸಿ, ಯಲಹಂಕ ವಲಯದ ಉಡುಪಿ ಹೋಟೆಲ್, ಆರ್.ಆರ್. ನಗರ ವಲಯದ ಗಂಗಾಧರ್ ಕ್ಯಾಟರಿಂಗ್, ಪಶ್ಚಿಮ ವಲಯದ ಇಂದಿರಾ ಕ್ಯಾಂಟೀನ್, ಗಾಯತ್ರಿ ನಗರ, ಮಹದೇವಪುರ ವಲಯದ ಹೈದರಾಬಾದ್ ಬಿರಿಯಾನಿ ಹೌಸ್ ಹಾಗೂ ಉಡುಪಿ ಹೋಟೆಲ್, ದಾಸರಹಳ್ಳಿ ವಲಯದ ಎಲೈಟ್ ಹೋಟೆಲ್, ದಕ್ಷಿಣ ವಲಯದಲ್ಲಿ ನಂದಿನಿ, ಎಸ್ಎಲ್ಎನ್ ಮಿಲಿಟರಿ ಹೋಟೆಲ್ನವರು ಪ್ರಾಣಿಗಳಿಗೆ ಆಹಾರ ನೀಡುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.