ಬೆಂಗಳೂರು: ಮಾಜಿ ಶಾಸಕ ಅನಿಲ್ ಲಾಡ್ಗೆ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಹೈಗ್ರೌಂಡ್ ಠಾಣೆಯ ಪೊಲೀಸರು, ಆರ್.ಶಿವಕುಮಾರ್ ಎಂಬುವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ.

‘ಕುಮಾರಪಾರ್ಕ್ ವೆಸ್ಟ್ನಲ್ಲಿ ‘ಕುಮಾರ್ ಎಂಟರ್ ಪ್ರೈಸಸ್’ ಹೆಸರಿನ ಕಚೇರಿ ನಡೆಸುತ್ತಿರುವ ಆರ್.ಶಿವಕುಮಾರ್ ಹಾಗೂ ಎಸ್.ರಂಜಿತಾ ಎಂಬುವರು ನನ್ನಿಂದ ₹15.55 ಕೋಟಿ ಪಡೆದುಕೊಂಡಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಸುಫಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅನಿಲ್ ಲಾಡ್ ದೂರು ನೀಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ರವಿ ಪೂಜಾರಿ ಹೆಸರಿನಲ್ಲಿ ಲಾಡ್ಗೆ ಕರೆ ಮಾಡಿದ್ದ ಅಪರಿಚಿತ, ‘ಪದೇ ಪದೇ ಹಣ ಕೇಳಿದರೆ ನಿನ್ನನ್ನು ಕೊಲೆ ಮಾಡುತ್ತೇನೆ’ ಎಂಬುದಾಗಿ ಬೆದರಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಬೆದರಿಕೆ ಕರೆ ಬಗ್ಗೆ ಪ್ರತ್ಯೇಕವಾಗಿ ದೂರು ನೀಡಿದ್ದ ಅನಿಲ್ ಲಾಡ್, ಆರ್.ಶಿವಕುಮಾರ್ ಹಾಗೂ ಎಸ್.ರಂಜಿತಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಆರೋಪಿಗಳನ್ನು ಶನಿವಾರ ಕಚೇರಿಗೆ ಕರೆಸಲಾಗಿತ್ತು. ಮಂಗಳವಾರ ಪುನಃ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟು ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.