ದಾಬಸ್‌ಪೇಟೆ: ಸೋಂಪುರ ಹೋಬಳಿ ನರಸೀಪುರ ತೋಪಿನಲ್ಲಿರುವ ಆತ್ಮಾರಾಮಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದ ಮೂಲ ದೇವರಿಗೆ ಅಭಿಷೇಕ, ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿದ್ದವು. ಹೂವುಗಳಿಂದ ಅಲಂಕೃತವಾದ ಉತ್ಸವಮೂರ್ತಿಯನ್ನು ತೆಗೆದುಕೊಂಡು ಮಂಗಳವಾದ್ಯ ಸಮೇತ ದೇವಾಲಯದ ಸುತ್ತು ಪ್ರದಕ್ಷಿಣೆ ಹಾಕಿ ನಂತರ ಅರವಂಟಿಕೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿದ ನಂತರ ಬಣ್ಣಬಣ್ಣದ ಬಟ್ಟೆ ಹಾಗೂ ಹೂವುಗಳಿಂದ ಅಲಂಕೃತಗೊಂಡ ರಥದಲ್ಲಿ ಕೂರಿಸಲಾಯಿತು.

ರಥದ ಮುಂಭಾಗ ದಾಸಪ್ಪ ಜಾಗಟೆ ಬಾರಿಸುತ್ತಾ, ಮಣೆವು ಹಾಕಿ ಪೂಜೆ ಮಾಡಲಾಯಿತು. ವಾಡಿಕೆಯಂತೆ ಗರುಡ ಪಕ್ಷಿ ರಥದ ಮೇಲೆ ಮೂರು ಸುತ್ತು ಹಾಕುತ್ತಿದ್ದಂತೆ, ಭಕ್ತರು ಜಯ ಘೋಷದೊಂದಿಗೆ ತೇರನ್ನು ಮುಂದೆ ಎಳೆಯುತ್ತಾ ಸಾಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.