ಬೆಂಗಳೂರು: ‘ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡಾಗ ಒಂದಷ್ಟು ಜನರಿಗೆ ಪ್ರೇರಣೆ, ಮಾರ್ಗದರ್ಶನ ಆಗಬಹುದೆಂಬ ಕಾರಣಕ್ಕೆ ಆತ್ಮಕತೆ ಬರೆದೆ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಸಹಯೋಗದಲ್ಲಿ ಸ್ಪರ್ಶ್ ಫೌಂಡೇಶನ್ ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ‘ಕಳೆದ ಕಾಲ ನಡೆದ ದೂರ’ ಆತ್ಮಕಥನದ ಕಿರು ಅವತರಣಿಕೆ ಬಿಡುಗಡೆಯಾಯಿತು. ಇದು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎಸ್ಸಿ ಪ್ರಥಮ ಸೆಮಿಸ್ಟರ್ನ ಪಠ್ಯ ಪುಸ್ತಕವಾಗಿದೆ.

ಈ ವೇಳೆ ಮಾತನಾಡಿದ ಶಿವರಾಜ ಪಾಟೀಲ, ‘ನಾವು ಪಡೆದುಕೊಂಡ ಜ್ಞಾನ ಮತ್ತು ಅನುಭವ ಹಾಗೇ ತಲೆಯಲ್ಲಿ ಉಳಿದರೆ ದಾಸ್ತಾನು ಕೊಠಡಿಯಂತೆ ಆಗಲಿದೆ. ಆದ್ದರಿಂದಲೇ ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡಿದ್ದೇನೆ. ಸಾಧನೆಯ ಹಾದಿಯಲ್ಲಿ ಹಲವಾರು ಅಡೆತಡೆಗಳು ಬರುತ್ತವೆ. ಈ ಮಾರ್ಗದಲ್ಲಿ ಎದೆಗುಂದದೆ ಸವಾಲುಗಳನ್ನು ಸೋಪಾನ ಮಾಡಿಕೊಂಡು ಸಾಗಬೇಕು’ ಎಂದರು.

‘ಗ್ರಾಮಾಂತರ ಪ್ರದೇಶ ಮತ್ತು ಬಡತನ ಪುಸ್ತಕದ ಕೇಂದ್ರ ಬಿಂದುವಾಗಿದ್ದು, ಅಡೆತಡೆಗಳನ್ನು ಮೀರಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಹೇಗೆ ಬೆಳೆಯಬೇಕು ಎಂಬುದನ್ನು ತಿಳಿಸುತ್ತದೆ. ಪರಿಶ್ರಮ, ಪ್ರಾಮಾಣಿಕತೆ, ವಿನಯ, ಶಿಸ್ತು ಹಾಗೂ ಸಮಯ ಪ್ರಜ್ಞೆ ರೂಢಿಸಿಕೊಂಡಲ್ಲಿ ಗ್ರಾಮಾಂತರ ಪ್ರದೇಶ ಮತ್ತು ಬಡತನ ಸಾಧನೆಗೆ ಅಡ್ಡಿಯಾಗದೆ, ಮೆಟ್ಟಿಲುಗಳಾಗುತ್ತವೆ’ ಎಂದು ಹೇಳಿದರು.

ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಬದುಕಿನ ಎಲ್ಲ ಏಳು ಬೀಳುಗಳನ್ನು ಒಳಗೊಂಡಿರುವುದೇ ಆತ್ಮಕಥೆ. ಶಿವರಾಜ ಪಾಟೀಲ ಅವರ ಆತ್ಮಕಥೆಯು ನ್ಯಾಯಾಂಗ ಕ್ಷೇತ್ರದಲ್ಲಿ ಇರುವವರು ಹಾಗೂ ಯುವಜನರಿಗೆ ಮಾರ್ಗದರ್ಶಕ ಕೃತಿಯಾಗಲಿದೆ. ಕಲ್ಯಾಣ ಕರ್ನಾಟಕದ ಒಂದು ಕುಗ್ರಾಮದಲ್ಲಿ ಜನಿಸಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕಥನ ಅತ್ಯಂತ ರೋಚಕವೂ, ಅನನ್ಯವೂ ಆಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ. ಪೋತೆ, ‘ಕಲ್ಯಾಣ ಕರ್ನಾಟಕವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ‘ಕವಿರಾಜಮಾರ್ಗ’, ‘ವಡ್ಡಾರಾಧನೆ’ ಕೂಡ ಅದೇ ಭಾಗದಿಂದ ಬಂದಿವೆ. ವಚನಕಾರರು, ತತ್ವಪದಕಾರರು, ಸೂಫಿಗಳು ಕೂಡ ಅಲ್ಲಿಯವರೇ ಆಗಿದ್ದು, ದಲಿತ ಚಳವಳಿ, ಬಂಡಾಯ ಚಳವಳಿ ಪ್ರಾರಂಭವಾದದ್ದು ಸಹ ಅಲ್ಲಿಯೇ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.