ಹೊಸ ಯೋಜನೆ ಆಗಿರುವುದರಿಂದ ಜಾರಿ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. 2025ರಲ್ಲಿ ಅಟೊಮೇಟಿವ್ ಟೆಸ್ಟಿಂಗ್ ಸ್ಟೇಷನ್‌ಗಳು (ಎಟಿಎಸ್) ಕಾರ್ಯಾಚರಿಸಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ದೇವನಹಳ್ಳಿ ಕೋಲಾರ ಹೊಸಪೇಟೆ ಗದಗ ಬಳ್ಳಾರಿ ವಿಜಯಪುರ ಬೀದರ್ ಯಾದಗಿರಿ ದಾವಣಗೆರೆಗಳಲ್ಲಿ ₹ 80 ಕೋಟಿ ವೆಚ್ಚದಲ್ಲಿ ಪರೀಕ್ಷಾ ಪಥ ನಿರ್ಮಿಸಲಾಗುತ್ತಿದೆ. ತುಮಕೂರು ಯಲಹಂಕ ಶಿರಸಿ ಸಕಲೇಶಪುರ ಕೆ.ಜಿ.ಎಫ್. ಚಿಂತಾಮಣಿ ಸಾಗರ ಗೋಕಾಕ ರಾಣೆಬೆನ್ನೂರು ದಾಂಡೇಲಿ ಭಾಲ್ಕಿ ಬೈಲಹೊಂಗಲಗಳಲ್ಲಿ ₹ 72.95 ಕೋಟಿ ವೆಚ್ಚದಲ್ಲಿ ಪರೀಕ್ಷಾ ಪಥ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗಿದೆ. ಆರು ಕಡೆಗಳಲ್ಲಿ ಪಥ ನಿರ್ಮಿಸಲು ಈ ಬಾರಿಯ ಬಜೆಟ್‌ನಲ್ಲಿ ₹ 36 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.