ಬೆಂಗಳೂರು: ಯಾವುದೇ ಒಂದು ಅಭ್ಯಾಸ, ಚಿಂತನೆ ಅಥವಾ ನಡವಳಿಕೆಯು ವ್ಯಕ್ತಿಯ ವಂಶವಾಹಿಯ ವರ್ತನೆ ಮೇಲೆ ನೇರ ಪ್ರಭಾವ ಬೀರುತ್ತವೆ. ಇದರಿಂದ ಒಳ್ಳೆಯ ಅಥವಾ ಕೆಟ್ಟ ಬದಲಾವಣೆಗಳೂ ಆಗುತ್ತವೆ. ಈ ಗುಣ ಲಕ್ಷಣಗಳು ಗುಪ್ತಗಾಮಿನಿಯಂತೆ ಮುಂದಿನ ಪೀಳಿಗೆಗೂ ರವಾನೆ ಆಗುತ್ತವೆ!

ಗರ್ಭಿಣಿಯರಲ್ಲಿ ಧೂಮಪಾನ ಅಥವಾ ಮದ್ಯಪಾನದ ಅಭ್ಯಾಸವಿದ್ದರೆ; ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗಿದ್ದರೆ ಅವುಗಳ ಗಂಭೀರ ಪರಿಣಾಮಗಳು ಹಲವು ಪೀಳಿಗೆಗಳಿಗೂ ಮುಂದುವರಿಯುತ್ತವೆ ಎನ್ನುತ್ತಾರೆ ಭಾರತ ಸರ್ಕಾರದ ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಆಣ್ವಿಕ ಜೀವ ವಿಜ್ಞಾನಿ ಡಾ.ತಪಸ್ ಕುಮಾರ್ ಕುಂಡು.

ದುಶ್ಚಟಗಳು, ಮನೋ ಒತ್ತಡಗಳಿಂದ ಜೀನ್ಗಳಲ್ಲಿ ಮಾರ್ಪಾಡು ಆಗುತ್ತವೆ. ಅವು ಕಾಯಿಲೆ ತರುವ ಜೀನ್
ಗಳಾಗಿಯೂ ರೂಪಾಂತರಗೊಳ್ಳುತ್ತವೆ. ಗರ್ಭಿಣಿಯರು ಉತ್ತಮ ಅಭ್ಯಾಸಗಳು, ಒಳ್ಳೆಯ ವಾತಾವರಣ
ದಲ್ಲಿದ್ದರೆ ಜೀನ್ನಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತದೆ. ಡಿಎನ್ಎ ಅನುಕ್ರಮ ಫೈನ್ ಟ್ಯೂನ್ ಆಗುತ್ತವೆ. ಇದರಿಂದ ಜೀನ್ ವರ್ತನೆ ಸಕಾರಾತ್ಮಕವಾಗಿರುತ್ತದೆ ಎಂದು ಅವರು ಭಾರತೀಯ ವಿಜ್ಞಾನ ಕಾಂಗ್ರೆಸ್ನಲ್ಲಿ ತಿಳಿಸಿದರು.

‘ಈ ರೂಪಾಂತರದ ಪ್ರಕ್ರಿಯೆಗೆ ಎಪಿಜೆನಿಟಿಕ್ಸ್ ಎನ್ನಲಾಗುತ್ತದೆ. ವಂಶವಾಹಿಯು ವ್ಯಕ್ತಿತ್ವ ನಿರ್ಧರಿಸುವುದಕ್ಕಿಂತ ಎಪಿಜೆನಿಟಿಕ್ಸ್ ಹೆಚ್ಚು ಪ್ರಭಾವ ಬೀರುತ್ತದೆ. ನಾನು ಹುಟ್ಟಿನಿಂದ ಬಂಗಾಳಿಯಾದರೂ, ಬೆಂಗಳೂರಿನ ಜಿಕೆವಿಕೆ, ಜೆಎನ್ಸಿಎಎಸ್ಆರ್ನಲ್ಲಿ ಬಹಳ ಸಮಯ ಇದ್ದ ಕಾರಣನನ್ನ ಎಪಿಜೆನಿಟಿಕ್ಸ್ ಕನ್ನಡದ್ದು’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.