ಬೆಂಗಳೂರು: ಕರ್ತವ್ಯ ನಿರ್ಲಕ್ಷ್ಯ, ಲಂಚಕ್ಕೆ ಬೇಡಿಕೆಯ ದೂರು ಸೇರಿ ವಿವಿಧ ಆರೋಪಗಳ ಕಾರಣದಿಂದ ಬಿಬಿಎಂಪಿ ದಕ್ಷಿಣ ವಲಯದ ಆಹಾರ ಸುರಕ್ಷತಾಧಿಕಾರಿ ಸುರೇಶ್ ಎಚ್. ಅವರನ್ನು ಅಮಾನತು ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಮಲ್ಲೇಶ್ವರದ ಮಂತ್ರಿ ಮಾಲ್‌ನಲ್ಲಿನ ಹೋಟೆಲ್‌ಗಳು, ಸೂಪರ್ ಮಾರುಕಟ್ಟೆಗಳು ಹಾಗೂ ಐಸ್‌ಕ್ರೀಂ ಪಾರ್ಲರ್‌ಗಳನ್ನು ಆಗಸ್ಟ್ 3 ರಂದು ಪರಿಶೀಲಿಸಲಾಗಿತ್ತು. ಆ ವೇಳೆ ಅಲ್ಲಿ ಎರಡು ವಿಧದ ಮೊಟ್ಟೆಗಳು ಕಂಡುಬಂದಿದ್ದವು. ಈ ಮೊಟ್ಟೆಗಳನ್ನು ಹೊಂಗಸಂದ್ರದ ಕಂಪನಿಯೊಂದರಿಂದ ಪೂರೈಸಲಾಗಿತ್ತು. ಸ್ಥಳ ಪರೀಕ್ಷಿಸಿ, ಮೊಟ್ಟೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸುರೇಶ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಈವರೆಗೂ ವರದಿ ನೀಡಿಲ್ಲ. ಆರು ತಿಂಗಳ ಮಾಸಿಕ ವರದಿಯನ್ನೂ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಆಹಾರ ಉದ್ಯಮಗಳಿಗೆ ಭೇಟಿ ನೀಡಿ, ತಪಾಸಣೆ ಮಾಡುವ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ’ ಎಂದು ಆಹಾರ ಉದ್ದಿಮೆದಾರರಿಂದ ಸುರೇಶ್ ಅವರ ವಿರುದ್ಧ ದೂರುಗಳಿವೆ. ಸಾರ್ವಜನಿಕರಿಂದ ಸ್ವೀಕೃತಗೊಂಡ ದೂರುಗಳ ಬಗ್ಗೆಯೂ ಅವರು ಪರಿಶೀಲಿಸಿ, ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಇಲಾಖೆ ವಿಚಾರಣೆ ಬಾಕಿ ಇರಿಸಿ, ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.