ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್–2ರ ಕಾಮಗಾರಿ ನಡೆಯುತ್ತಿದೆ.
ಉಪನಗರ ರೈಲು ಯೋಜನೆಯ ನಕ್ಷೆ
ಸಂಸದರು ನಿಯಮಿತವಾಗಿ ಪ್ರಗತಿಪರಿಶೀಲನೆ ನಡೆಸಿದ್ದರೆ ಸಮಸ್ಯೆ ಅರ್ಥವಾಗುತ್ತಿತ್ತು. ಕರ್ತವ್ಯ ನಿರ್ವಹಿಸುವುದು ಬಿಟ್ಟು ಹೊರಗೆ ಟೀಕಿಸುತ್ತಾ ರಾಜಕಾರಣ ಮಾಡಿಕೊಂಡು ತಿರುಗಾಡಿದರು. ರಾಜ್ಯ ಸರ್ಕಾರವೂ ಪಟ್ಟು ಹಿಡಿದು ಕೆಲಸ ಮಾಡಿಸಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಸಚಿವರು ಅಪರೂಪಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಲಿಲ್ಲ. ಜನಪ್ರತಿನಿಧಿಗಳು ಚುರುಕಾದರೆ ಅಧಿಕಾರಿಗಳು ಕೆಲಸ ಮಾಡುತ್ತಾರೆ.
- ಸಂಜೀವ್ ದ್ಯಾಮಣ್ಣನವರ್, ರೈಲ್ವೆ ಹೋರಾಟಗಾರ
ಬಿಎಸ್‌ಆರ್‌ಪಿಯನ್ನು ಕೆ–ರೈಡ್‌ಗೆ ಒಪ್ಪಿಸಿದ ಬಳಿಕ ರಾಜ್ಯದಲ್ಲಿ ಮೂರು ವರ್ಷ ಬಿಜೆಪಿ ಆಡಳಿತವಿತ್ತು. ಆಗ ಯಾವುದೇ ಪ್ರಗತಿ ಕಂಡಿರಲಿಲ್ಲ. ಕೇಂದ್ರ ರೈಲ್ವೆ ಸಚಿವರ ಮುತುವರ್ಜಿಯಿಂದಾಗಿ ಕಾಮಗಾರಿಗೆ ಚಾಲನೆ ಸಿಕ್ಕಿತು. ನಿಧಾನವಾಗಿಯಾದರೂ ಕಾಮಗಾರಿ ಸಾಗುತ್ತಿದೆ. ಈ ಹಂತದಲ್ಲಿ ಕೆ–ರೈಡ್ ತಾಂತ್ರಿಕವಾಗಿ ಗಟ್ಟಿ ಇಲ್ಲ ಎಂದು ಸಂಸದರೊಬ್ಬರು ಹೇಳುತ್ತಾ ಕಾಮಗಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ತಾಂತ್ರಿಕ ನಿಪುಣರ ಕೊರತೆ ಇದ್ದರೆ ಅದನ್ನು ನೀಗಿಸಬೇಕಿರುವುದು ಸಂಸದರ ಕರ್ತವ್ಯ. ನಗರದ ಮೂವರು ಸಂಸದರೂ ಬಿಎಸ್‌ಆರ್‌ಪಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
- ರಾಜಕುಮಾರ್ ದುಗಾರ್, ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥಾಪಕ
ಕೆ–ರೈಡ್ ಮತ್ತು ರೈಲ್ವೆ ನಡುವೆ ಸಂವಹನದ ಕೊರತೆಯಿದೆ. ರೈಲ್ವೆ ಇಲಾಖೆಯೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆ–ರೈಡ್‌ಗೆ ಕಾಯಂ ಎಂ.ಡಿ. ಕೂಡ ಇಲ್ಲ. ಒಂದೊಂದು ಸಹಿಗೂ ಕಡತ ಹಿಡಿದು ಅಲೆದಾಡಬೇಕು. ₹15 ಸಾವಿರ ಕೋಟಿಯ ಯೋಜನೆಯೊಂದು ಈ ಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ ಎಂದರೆ ಅದಕ್ಕೆ ಕೇಂದ್ರ ರಾಜ್ಯದ ಜನಪ್ರತಿನಿಧಿಗಳೇ ನೇರ ಹೊಣೆ.