2026ರ ಒಳಗೆ ಉಪನಗರ ರೈಲು ಯೋಜನೆ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಕಾರಿಡಾರ್–2 ಮಾತ್ರ ಶೇ 15ರಷ್ಟು ಕಾಮಗಾರಿಗಳಾಗಿವೆ. ಎಲ್ಲ ನಾಲ್ಕು ಕಾಮಗಾರಿಗಳನ್ನು ಪರಿಗಣಿಸಿದರೆ ಶೇ 4ರಷ್ಟು ಕಾಮಗಾರಿಯಷ್ಟೇ ನಡೆದಿದೆ. ಈಗಿನ ವೇಗವನ್ನು ನೋಡಿದರೆ ನಾಲ್ಕು ಕಾರಿಡಾರ್ ಪೂರ್ಣಗೊಳ್ಳಲು ಏಳೆಂಟು ವರ್ಷಗಳು ಬೇಕಾಗುತ್ತದೆ. ಬೆನ್ನತ್ತಿ ಕೆಲಸ ಮಾಡಿಸುವ ಅಧಿಕಾರಿಗಳು ಬೇಕು. ರಾಜಕುಮಾರ್ ದುಗರ್ ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥಾಪಕ ‘ವಿಸಿಟಿಂಗ್ ಎಂ.ಡಿ’ ಬೇಡ ₹ 15 ಸಾವಿರ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ನಡೆಸುವ ಸಂಸ್ಥೆಗೆ ಪೂರ್ಣ ಪ್ರಮಾಣದ ಎಂ.ಡಿ ಇಲ್ಲ ಎನ್ನುವುದು ಈ ಯೋಜನೆಗೆ ಸರ್ಕಾರಗಳು ಎಷ್ಟು ಪ್ರಾಮುಖ್ಯ ನೀಡಿವೆ ಎಂಬುದನ್ನು ತೋರಿಸುತ್ತದೆ. ಶೇ 20ರಷ್ಟು ಕೇಂದ್ರ ಸರ್ಕಾರ ಶೇ 20ರಷ್ಟು ರಾಜ್ಯ ಸರ್ಕಾರ ಅನುದಾನ ಒದಗಿಸುತ್ತದೆ. ಉಳಿದ ಶೇ 60ರಷ್ಟು ವೆಚ್ಚವನ್ನು ಬಾಹ್ಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕು. ವಿದೇಶಿ ಬ್ಯಾಂಕ್‌ಗಳ ಜೊತೆಗೆ ಸಂವಹನ ನಡೆಸಬೇಕು. ಅದಕ್ಕೆಲ್ಲ ಕಾಯಂ ಎಂಡಿ ಬೇಕು. ಹಿಂದಿನ ಎಂಡಿ ಸಮರ್ಥರಿದ್ದರೂ ಅವರಿಗೆ ಸಮಯ ಸಾಕಾಗುತ್ತಿರಲಿಲ್ಲ. ಹೊಸ ಎಂಡಿ ಕಾರ್ಯವೈಖರಿ ಹೇಗಿದೆ ಎಂಬುದು ಗೊತ್ತಿಲ್ಲ. ಹೊಸಬರನ್ನೇ ಮುಂದುವರಿಸುವುದಿದ್ದರೂ ಪರವಾಗಿಲ್ಲ ಅವರಿಗೆ ಬೇರೆ ಹೊಣೆಗಳನ್ನು ನೀಡಬಾರದು. ಇಲ್ಲದೇ ಇದ್ದರೆ ಅವರೂ ‘ವಿಸಿಟಿಂಗ್ ಎಂ.ಡಿ’ಯಾಗಬೇಕಾಗುತ್ತದೆ. ಕೆ.ಎನ್. ಕೃಷ್ಣಪ್ರಸಾದ್ ರೈಲ್ವೆ ಹೋರಾಟಗಾರ
ಮಂಜುಳಾ ನೂತನ ಎಂ.ಡಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಎನ್. ಮಂಜುಳಾ ಅವರಿಗೆ ‘ಕೆ–ರೈಡ್’ ಎಂ.ಡಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.