ಬೆಂಗಳೂರು: ವರ್ಷದ ಹಿಂದಷ್ಟೇ ಅಭಿವೃದ್ಧಿಪಡಿಸಲಾಗಿದ್ದ ಬೆನ್ನಿಗಾನಹಳ್ಳಿ ಕೆರೆ ಮತ್ತೆ ಅವಸಾನದ ಹಾದಿ ಹಿಡಿದಿದೆ. ಮಳೆ ಬಂದಾಗ ಕೆರೆಯ ದಡದ ಮೇಲಿನ ಮಣ್ಣು ಮತ್ತೆ ಒಡಲನ್ನು ಸೇರುತ್ತಿದೆ. ಕಲ್ಲು ಬೆಂಚುಗಳು ಮುರಿದು ಬಿದ್ದಿವೆ. ಮತ್ತೆ ಕಸ ಸುರಿಯಲಾಗುತ್ತಿದೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿನ ವಾರ್ಡ್ ಸಂಖ್ಯೆ 56ರಲ್ಲಿ ಇರುವ ಈ ಕೆರೆಯನ್ನು ಬಿಬಿಎಂಪಿಯ ಕೆರೆ ಅಭಿವೃದ್ಧಿ ವಿಭಾಗ ಹತ್ತು ತಿಂಗಳ ಹಿಂದೆ ಅಭಿವೃದ್ಧಿಪಡಿಸಿತ್ತು. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಮತ್ತೆ ದುಸ್ಥಿತಿಗೆ ತಲುಪಿದೆ. ‘ಈ ಕೆರೆಯ ಅಂಗಳದಲ್ಲಿ ವಾಯುವಿಹಾರ ಖುಷಿ ಎನಿಸುತ್ತಿತ್ತು. ಆದರೆ, ಈಗ ನಿರ್ವಹಣೆ ಸರಿಯಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.ಪ್ರತಿಕ್ರಿಯೆ ನೀಡಿದ ಪಾಲಿಕೆ ಸದಸ್ಯ ವಿ. ಸುರೇಶ್, ‘ಕೆರೆ ಅಭಿವೃದ್ಧಿಗೆ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಮತ್ತೆ ಕೆರೆಗೆ ಮತ್ತೆ ಭೇಟಿ ನೀಡಿ ಎಲ್ಲ ಸರಿಪಡಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.