ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ ಬೆಂಬಲಿಸಿ ನಗರದ ಜನಸ್ಪಂದನ, ಬೀ ಕಲ್ಚರ್ ಸಂಸ್ಥೆಗಳು ಗುರುವಾರ ಹಮ್ಮಿಕೊಂಡಿದ್ದ ಚಿತ್ರಕಲೆಗಳ ಪ್ರದರ್ಶನ ‘ದಿ ರಿನೈಸಾನ್ಸ್’ ಜನಮನ ಸೆಳೆಯಿತು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ನಾಯಕ ಹೇಗಿರಬೇಕು ಎನ್ನುವುದನ್ನು ರಾಹುಲ್ ಗಾಂಧಿ ಅವರು ಪಾದಯಾತ್ರೆ ಮೂಲಕ ತೋರಿಸಿದ್ದಾರೆ. ರಾಹುಲ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿದ್ದಾರೆ. ಜಾತಿ, ಧರ್ಮ, ಸಾಮಾಜಿಕ ಅಂತರದ ಭೇದವಿಲ್ಲದೇ ಎಲ್ಲರನ್ನೂ ಅಪ್ಪಿಕೊಳ್ಳುತ್ತಿದ್ದಾರೆ. ಅದನ್ನು ಬೆಂಬಲಿಸಿ ಪ್ರದರ್ಶನ ಆಯೋಜಿಸುತ್ತಿದ್ದೇವೆ’ ಎಂದು ಸಂಘಟಕ ದಿಲಾವರ್ ರಾಮದುರ್ಗ ತಿಳಿಸಿದರು.

ರಾಜಕೀಯ, ಸಾಮಾಜಿಕ, ಸಾಂಸ್ಕೃ ತಿಕ ಬದಲಾವಣೆಗಳಿಗೆ ಸಜ್ಜಾಗಬೇಕಿದೆ. ಇದಕ್ಕೆ ಪೂರಕವಾಗಿ ಭಾರತ್ ಜೋಡೊ ಯಾತ್ರೆ ಪುನರುತ್ಥಾನ ಉತ್ತಮ ಆರಂಭ ಒದಗಿಸಿದೆ. ಜೋಡೊ ನಡಿಗೆಯ ಕ್ಷಣಗಳನ್ನೇ ಆಧಾರವಾಗಿ ಇಟ್ಟುಕೊಂಡು ಚಿತ್ರಗಳನ್ನು ರಚಿಸಲಾಗಿದೆ. ಇದರಲ್ಲಿ ರಾಜಕೀಯ ಇಲ್ಲ. ಮನುಷ್ಯತ್ವದ ರಾಜಕಾರಣಕ್ಕೆ ಬೆಂಬಲವಷ್ಟೇ ಎಂದು ವಿವಿಧ ಕಲಾವಿದರು ಚಿತ್ರಕಲೆಗಳ ಕುರಿತು ವಿವರಿಸಿದರು.

23 ಕಲಾವಿದರ ಚಿತ್ರಗಳು ಪ್ರದರ್ಶನದಲ್ಲಿದ್ದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಡಾ.ಸಿ.ಎಸ್.ದ್ವಾರಕಾನಾಥ್, ಟುಡಾ ಶಶಿಧರ್, ಸಸಿಕಾಂತ್ ಸೆಂಥಿಲ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಎಸ್.ವಿಷ್ಣುಕುಮಾರ್, ಚಕ್ರವರ್ತಿ ಪ್ರದರ್ಶನ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.