ಬೆಂಗಳೂರು: ಬಿಟ್ಕಾಯಿನ್ ಹಗರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ತಂಡವು (ಎಸ್ಐಟಿ) ಸುನೀಶ್ ಹೆಗ್ಡೆ ಅವರ ಮನೆಯಲ್ಲಿ ₹ 14 ಲಕ್ಷ ಜಪ್ತಿ ಮಾಡಿಕೊಂಡಿದೆ.

ಪ್ರಮುಖ ಆರೋಪಿ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಹಗರಣಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಸಂಜಯನಗರ ನಿವಾಸಿ ಸುನೀಶ್ ಹೆಗ್ಡೆ, ಸದಾಶಿವನಗರದ ಪ್ರಸಿದ್ಧ ಅವರ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಲಾಗಿತ್ತು. ಈ ವೇಳೆ ಸುನೀಶ್ ಮನೆಯಲ್ಲಿ ನಗದು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

‘ಹಣ ಸಿಕ್ಕಿದ್ದಕ್ಕೆ ಸುನೀಶ್ ಯಾವುದೇ ದಾಖಲೆ ನೀಡಿಲ್ಲ. ಈತನ ಆಪ್ತ ಪ್ರಸಿದ್ಧ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸುನೀಶ್ ಹೆಗ್ಡೆ ಕ್ಲಬ್ವೊಂದನ್ನು ನಡೆಸುತ್ತಿದ್ಧಾನೆ. ಶ್ರೀಕಿ ಜೊತೆಗೆ ಸುನೀಶ್ ಸೇರಿಕೊಂಡು ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ದಾಖಲೆ ಸಿಕ್ಕಿವೆ. ಹೀಗಾಗಿ ಅವರ ಮನೆಯಲ್ಲಿ ಶೋಧ ನಡೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.