ಬೆಂಗಳೂರು: ‘ಬ್ರಿಗೇಡ್ ರಸ್ತೆಯಲ್ಲಿರುವ ಕಟ್ಟಡವೊಂದರಿಂದ ಬಿದ್ದು ಗಾಯಗೊಂಡಿದ್ದಾರೆ’ ಎನ್ನಲಾದ ಯುವತಿ, ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವತಿ ಗಾಯಗೊಂಡಿದ್ದ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಹರಿದಾಡಿದ್ದವು. ಯುವತಿಯ ಮಾಹಿತಿ ಮಾತ್ರ ಲಭ್ಯವಾಗಿರಲಿಲ್ಲ.

ಗಾಯಾಳು ಯುವತಿಗಾಗಿ ಹುಡುಕಾಟ ನಡೆಸಿದ ಪೊಲೀಸರು, ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಯುವತಿಗೆ ತೀವ್ರ ಪೆಟ್ಟು ಬಿದ್ದು, ಸದ್ಯಕ್ಕೆ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿಲ್ಲ.

‘ಇದೇ 25ರಂದು ರಾತ್ರಿ ಯುವತಿ, ಬ್ರಿಗೇಡ್ ರಸ್ತೆಯಲ್ಲಿರುವ ‘ಬ್ರಿಗೇಡ್ ಗಾರ್ಡನ್ಸ್ ರೆಸ್ಟೊರೆಂಟ್’ಗೆ ಬಂದಿದ್ದರು. ಅದೇ ಕಟ್ಟಡದಿಂದ ಬಿದ್ದಿದ್ದರು. ರಕ್ತದ ಮಡುವಿನಲ್ಲಿ ನರಳುತ್ತಿದ್ದ ಯುವತಿಯನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್–3 ಬಾರ್ ಆ್ಯಂಡ್ ರೆಸ್ಟೊರೆಂಟ್ ಮೇಲೆ ಸಿಸಿಬಿ ದಾಳಿ ಮಾಡಿತ್ತು. ಅದೇ ವೇಳೆ ಯುವತಿ ಕಟ್ಟಡದಿಂದ ಬಿದ್ದಿದ್ದರು. ಸಿಸಿಬಿ ದಾಳಿಗೆ ಹೆದರಿ ಯುವತಿ ‘ಬ್ರಿಗೇಡ್ ಗಾರ್ಡನ್ಸ್ ರೆಸ್ಟೊರೆಂಟ್’ನಿಂದ ಹಾರಿದ್ದರು ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ, ಎರಡೂ ರೆಸ್ಟೋರೆಂಟ್ಗಳು ಬೇರೆ ಬೇರೆ ರಸ್ತೆಯಲ್ಲಿವೆ’ ಎಂದರು.

‘ಯುವತಿ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಹೇಳಿಕೆ ಪಡೆಯಲಿದ್ದೇವೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.