ಬೆಂಗಳೂರು: ಅಭಿಷೇಕ್ ಅಯ್ಯಂಗಾರ್ ಅವರು ಬರೆದು ನಿರ್ದೇಶಿಸಿರುವ ‘ಬೈ2 ಕಾಫಿ‘ ನಾಟಕ ಇದೇ 10ರಂದು ಜೆ.ಪಿ. ನಗರದ ರಂಗಶಂಕರದಲ್ಲಿ ವೀಮೂವ್ ಥಿಯೇಟರ್ ತಂಡದಿಂದ ಪ್ರದರ್ಶನಗೊಳ್ಳಲಿದೆ.

ಮಧ್ಯಮ ವರ್ಗದ ಕುಟುಂಬದ ತಾಯಿ–ಮಗನ ಮಧ್ಯದ ಸಂಘರ್ಷಗಳ ಬಗ್ಗೆ ‘ಬೈ2 ಕಾಫಿ‘ ವಿವರಿಸುತ್ತದೆ. ಧರ್ಮ ನಿಷ್ಠ ತಾಯಿಯು ತನ್ನ ಮಗನ ಭದ್ರತೆಯ ಬಗ್ಗೆ ನಿರಂತರವಾಗಿ ಚಿಂತಿಸುವ ಈ ನಾಟಕದಲ್ಲಿ ತಾಯಿಯೊಬ್ಬಳು ಹೊಂದಿರುವ ನಂಬಿಕೆಗಳು, ಪದ್ಧತಿಗಳು ಮತ್ತು ಸಂಪ್ರದಾಯ, ಸಿದ್ಧಾಂತಗಳಿಗೆ ಮಗ ನೀಡುವ ಪ್ರಾಯೋಗಿಕ ಉತ್ತರಗಳು ಚಿಕತಗೊಳಿಸುತ್ತದೆ. ಅಮೆರಿಕದಲ್ಲಿ ನೆಲೆಸಿರುವ ಮಗ ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ವಿವಾಹಕ್ಕಾಗಿ ಬಯಸುವ ತಾಯಿಯ ತೊಳಲಾಟ, ಧಾರ್ಮಿಕ ತತ್ವಗಳ ಸೆಳೆತ ಇಲ್ಲಿ ಚಿತ್ರತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.