ಬೆಂಗಳೂರು: ನಗರದಲ್ಲಿ ಜನವರಿ8ರಿಂದ ಈಚೆಗೆ12 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಲಸಿಕೆ ಪಡೆದಿರಲಿಲ್ಲ ಮತ್ತು ಇನ್ನಿಬ್ಬರು ಕೇವಲ ಒಂದು ಡೋಸ್ ಲಸಿಕೆ ಮಾತ್ರವೇ ಪಡೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ.

ಮೃತರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದರೂ, ನಾಲ್ಕು ಮಂದಿ40ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಗಂಭೀರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮತ್ತು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯದ 32 ವರ್ಷ ವ್ಯಕ್ತಿ ಜನವರಿ8ರಂದು ಮೃತಪಟ್ಟಿದ್ದರು. ಸೋಂಕು ಕಾಣಿಸಿಕೊಂಡ7 ದಿನಗಳ ಬಳಿಕ ಅವರು ಮೃತಪಟ್ಟಿದ್ದರು ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎ.ಎಸ್.ಬಾಲಸುಂದರ್ ತಿಳಿಸಿದ್ದಾರೆ.

ಅದರ ಬೆನ್ನಲ್ಲೇ ಲಸಿಕೆ ಪಡೆಯದ 37 ವರ್ಷದ ವ್ಯಕ್ತಿಯೊಬ್ಬರುಮೂತ್ರಪಿಂಡ ವೈಫಲ್ಯದಿಂದಾಗಿ ಜನವರಿ9ರಂದು ಸಾವಿಗೀಡಾಗಿದ್ದರು.

ಲಸಿಕೆ ಪಡೆದುಕೊಂಡಿರದ 30 ವರ್ಷದ ಮತ್ತೊಬ್ಬರು, ಸೋಂಕು ತಗುಲಿದ್ದ ನಾಲ್ಕು ದಿನಗಳ ಬಳಿಕ ಜನವರಿ10ರಂದು ನಿಧನರಾಗಿದ್ದರು. ಅದೇ ದಿನ, 40 ವರ್ಷದ ವ್ಯಕ್ತಿಸಾವಿಗೀಡಾಗಿದ್ದರು. ಅವರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿರಲಿಲ್ಲ.

ಇತ್ತೀಚೆಗೆ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಶೇ 20 ರಷ್ಟು ಸೋಂಕಿತರು ಲಸಿಕೆ ಪಡೆದುಕೊಳ್ಳದವರಾಗಿದ್ದಾರೆ. ಅವರು, ಲಸಿಕೆ ಪಡೆದುಕೊಂಡವರಿಗಿಂತ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬಾಲಸುಂದರ್ ಕಳವಳ ವ್ಯಕ್ತಪಡಿಸಿದ್ದಾರೆ.

ಜನವರಿ ತಿಂಗಳ ಮೊದಲ10 ದಿನಗಳಲ್ಲಿ36,025 ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ5,631 ಮಂದಿ ಲಸಿಕೆ ಪಡೆಯದವರಾಗಿದ್ದಾರೆ. ಇನ್ನೂ 3,819 ಜನರು ಒಂದು ಡೋಸ್ ಮಾತ್ರವೇ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಸಂಪೂರ್ಣ ಲಸಿಕೆ ಪಡೆದವರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುವ ಪ್ರಮಾಣ ಶೇ.0.88 ರಷ್ಟಿದ್ದರೆ, ಒಂದೂ ಡೋಸ್ ಪಡೆಯದವರಲ್ಲಿ ಈ ಪ್ರಮಾಣ ಶೇ3.68 ರಷ್ಟಿದೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯದಶೇ 2.07 ಸೋಂಕಿತರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.