ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಬಳಸಿ ಕೃತ್ಯ ಎಸಗುತ್ತಿದ್ದ ತಂಡ

ಬೆಂಗಳೂರು: ಸೈಬರ್ ವಂಚನೆಗೆ ವಿದ್ಯಾರ್ಥಿಗಳ ದಾಖಲಾತಿ ಪಡೆದು ಬ್ಯಾಂಕ್ ಖಾತೆ ತೆರೆಸುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು, ರಾಜಸ್ಥಾನದ ನಾಲ್ವರು
ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಜೈಸಲ್ಮೇರ್ನ ಪವನ್ ಬಿಷ್ಣೋಯಿ(18), ಸವಾಯಿ ಸಿಂಗ್(21) ಹಾಗೂ ಜೋಧಪುರದ ಅರವಿಂದ್ ಕುಮಾರ್ (19), ಅಭಯ್ ಚರಣ್(19) ಬಂಧಿತರು. ಇಬ್ಬರನ್ನು ರಾಜಸ್ಥಾನ, ಮತ್ತಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.

‘ರಾಜಸ್ಥಾನದ ಉದಯಪುರದಲ್ಲಿ ಆರೋಪಿಗಳು ಬಾಡಿಗೆ ಮನೆ ಮಾಡಿಕೊಂಡಿದ್ದರು. ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದರು. ಆ ಮನೆಯಲ್ಲಿದ್ದ 19 ಮೊಬೈಲ್ ಫೋನ್ಗಳು, ಎರಡು ಲ್ಯಾಪ್ಟಾಪ್, 20 ಸಿಮ್ ಕಾರ್ಡ್ಗಳು, ವಿದ್ಯಾರ್ಥಿಗಳ ಮೂಲಕ ತೆರೆಸಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 34 ಬ್ಯಾಂಕ್ ಪಾಸ್ಬುಕ್, 106 ಕ್ರೆಡಿಟ್/ಡೆಬಿಟ್ ಕಾರ್ಡ್, 39 ಬ್ಯಾಂಕ್ ಚೆಕ್ಬುಕ್, ₹75 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಲೈಕ್ ಬಟನ್ ಒತ್ತಿದರೆ ಹಣ ಸಂಪಾದನೆ ಆಗಲಿದೆ ಎಂಬುದಾಗಿ ಸೈಬರ್ ಕಳ್ಳರು ಆನ್ಲೈನ್ನಲ್ಲಿ ಆಮಿಷವೊಡ್ಡುತ್ತಾರೆ. ಅಂತಹ ಆಮಿಷಕ್ಕೆ ಜನರು ಒಳಗಾಗಬಾರದು. ಬೇರೆಯವರಿಗೆ ಬ್ಯಾಂಕ್ ಖಾತೆ ವಿವರ ನೀಡಬಾರದು ..
ಬಿ.ದಯಾನಂದ, ನಗರ ಪೊಲೀಸ್ ಕಮಿಷನರ್

‘ಅಕ್ಟೋಬರ್ 6ರಂದು ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದ ಮಧ್ಯವರ್ತಿಗಳು, ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದರು. ಅರೆಕಾಲಿಕ ಉದ್ಯೋಗದಲ್ಲಿ ಹೆಚ್ಚಿನ ಸಂಪಾದನೆ ಇದ್ದು, ಉದ್ಯೋಗ ಕೊಡಿಸಲು ಹಣ ನೀಡುವಂತೆಯೂ ಹೇಳಿದ್ದರು. ಮಧ್ಯವರ್ತಿಗಳ ಮಾತು ನಂಬಿದ್ದ ವ್ಯಕ್ತಿ, ವಿವಿಧ ಬ್ಯಾಂಕ್ ಖಾತೆಗಳಿಗೆ ₹12.43 ಲಕ್ಷ ವರ್ಗಾವಣೆ ಮಾಡಿದ್ದರು. ಕೆಲವು ದಿನಗಳ ಬಳಿಕ ವಂಚನೆ ನಡೆದಿರುವುದು ಗೊತ್ತಾಗಿ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ವಂಚನೆಗೆ ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆ ತೆರೆಸುತ್ತಿದ್ದ ಸಂಗತಿ ಬಯಲಾಯಿತು’ ಎಂದು ಮಾಹಿತಿ ನೀಡಿದರು.

‘ತನಿಖೆಯ ಆರಂಭದಲ್ಲಿ ಒಬ್ಬ ಖಾತೆದಾರರನ್ನು ಕರೆಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆತ ವಿದ್ಯಾರ್ಥಿ ಎಂಬುದು ಗೊತ್ತಾಯಿತು. ರಾಜಸ್ಥಾನದ ವ್ಯಕ್ತಿಗಳು ಬಂದು, ಕರೆನ್ಸಿ ಬದಲಾವಣೆಗೆ ಬ್ಯಾಂಕ್ ಖಾತೆಗಳ ಅಗತ್ಯವಿದ್ದು, ಖಾತೆ ಮಾಡಿಕೊಟ್ಟರೆ ತಮಗೂ ಲಾಭಾಂಶವಿದೆ ಎಂಬುದಾಗಿ ವಿದ್ಯಾರ್ಥಿಗಳನ್ನು ನಂಬಿಸುತ್ತಿದ್ದರು. ಈ ರೀತಿ ಹಲವು ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಬ್ಯಾಂಕ್ ಖಾತೆ ತೆರೆಸಿದ್ದರು’ ಎಂದು ಮಾಹಿತಿ ನೀಡಿದರು.

ಪಾಸ್ಬುಕ್, ಸಿಮ್ ವಶಕ್ಕೆ: ‘ಬ್ಯಾಂಕ್ ಖಾತೆ ತೆರೆಸಿದ ನಂತರ, ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಯ ಪಾಸ್ಬುಕ್, ಚೆಕ್ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆ ತೆರೆಯಲು ಬಳಸಿದ್ದ ಸಿಮ್ ಕಾರ್ಡ್ಗಳನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಕ್ರಿಪ್ಟೊ ಕರೆನ್ಸಿ ಖರೀದಿ: ವಿದ್ಯಾರ್ಥಿಗಳ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಆರೋಪಿಗಳು ವಂಚನೆಗೆ ಬಳಕೆ ಮಾಡುತ್ತಿದ್ದರು. ಖಾತೆಗೆ ಬಂದ ಹಣವನ್ನು ತಕ್ಷಣವೇ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಆ ಖಾತೆಗಳಿಂದ ‘ಬಿನಾನ್ಸ್ ಪ್ಲಾಟ್ಫಾರಂ’ ಮೂಲಕ ಯುಎಸ್ಡಿಟಿ (ಕ್ರಿಪ್ಟೊ ಕರೆನ್ಸಿ) ಖರೀದಿಸಿ, ಯುಎಸ್ಡಿಟಿ ಅನ್ನು ಡಿಜಿಟಲ್ ವಾಲೆಟ್ಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಈ ರೀತಿಯ ವರ್ಗಾವಣೆಯಿಂದ ಆರೋಪಿಗಳು ಹೆಚ್ಚಿನ ಲಾಭಾಂಶ ಪಡೆದುಕೊಳ್ಳುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳ ಸ್ನೇಹ: ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಬಳಿಗೆ ತೆರಳುತ್ತಿದ್ದ ಆರೋಪಿಗಳು, ವಿದ್ಯಾರ್ಥಿಗಳ ಸ್ನೇಹ ಸಂಪಾದಿಸುತ್ತಿದ್ದರು. ನಂತರ, ಬ್ಯಾಂಕ್ ಖಾತೆ ತೆರೆದುಕೊಡುವಂತೆ ಮನವೊಲಿಸುತ್ತಿದ್ದರು ಎಂಬುದು ಗೊತ್ತಾಗಿದೆ.

ಕಣ್ಗಾವಲಲ್ಲಿರಿಸಿ ₹ 41 ಲಕ್ಷ ಸುಲಿಗೆ

ಶಿವಮೊಗ್ಗ: ಮೈಸೂರು ಕಾಗದ ಕಾರ್ಖಾನೆಯ (ಎಂಪಿಎಂ) ನಿವೃತ್ತ ಉದ್ಯೋಗಿ ಎಲ್.ಎಸ್. ಆನಂದ್(72) ಅವರಿಂದ ‘ಡಿಜಿಟಲ್ ಅರೆಸ್ಟ್’ ಮೂಲಕ ₹ 41 ಲಕ್ಷ ಸುಲಿಗೆ ಮಾಡಿದ್ದ ಉತ್ತರ ಪ್ರದೇಶದ ಇಬ್ಬರನ್ನು ಇಲ್ಲಿನ ಸಿಇಎನ್ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಉತ್ತರ ಪ್ರದೇಶದ ವಲೀದ್ಪುರ ನಗರದ ಮೊಹಮ್ಮದ್ ಅಹಮದ್ (45), ಅಜಂಗಡ ಜಿಲ್ಲೆಯ ಮೊಹುಡಿಯಾ ಗ್ರಾಮದ ಅಭಿಷೇಕ್ ಕುಮಾರ್ ಶೇಟ್ (27) ಬಂಧಿತರು. ಆರೋಪಿಗಳಿಂದ ₹ 23,89,751 ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಇಂಟರ್ಪೋಲ್ ನೆರವು ಕೋರಲಾಗಿದೆ.

ಘಟನೆಯ ವಿವರ: ಇಲ್ಲಿನ ಗೋಪಾಲಗೌಡ ಬಡಾವಣೆ (ಗೋಪಾಳ) ನಿವಾಸಿ ಎಲ್.ಎಸ್. ಆನಂದ್ ಅವರಿಗೆ ಸೆಪ್ಟೆಂಬರ್ 27ರಂದು ವಿಡಿಯೊ ಕರೆ ಮಾಡಿದ್ದ ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು.

‘ನಿಮ್ಮ ಆಧಾರ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಂತೆಯೇ ನಿಮ್ಮ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಬಂಧನಕ್ಕೆ ವಾರಂಟ್ ಜಾರಿ ಆಗಿದೆ. ನಿಮಗೆ ಸಂಬಂಧಿಸಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪ್ರಕರಣದಿಂದ ನೀವು ಹೊರಬರಬೇಕಾದರೆ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕು’ ಎಂದು ಹೇಳಿ, ₹ 41 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು.

ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬರುತ್ತಲೇ ಆನಂದ್ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಡಿವೈಎಸ್ಪಿ ಕೆ.ಕೃಷ್ಣಮೂರ್ತಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಮಂಗಳವಾರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಂಧಿಸಿ ಕರೆತಂದಿದೆ.

‘ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮೊದಲ ಡಿಜಿಟಲ್ ಅರೆಸ್ಟ್ ಹೆಸರಿನ ವಂಚನೆ ಪ್ರಕರಣ ಇದಾಗಿದೆ. ಸಾರ್ವಜನಿಕರು ಈ ರೀತಿ ಅಪರಿಚಿತರು ಕರೆ ಮಾಡಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ಮನವಿ ಮಾಡಿದ್ದಾರೆ.

ಪ್ರಮುಖ ಆರೋಪಿ ಪರಾರಿ: ಬಂಧನಕ್ಕೆ ಒಳಗಾಗಿರುವ ಮೊಹಮ್ಮದ್ ಅಹಮದ್ನ ಪುತ್ರ ಶಾಕೀರ್ ಅಲಿ (24) ಈ ಪ್ರಕರಣದ ಪ್ರಮುಖ ಆರೋಪಿ. ಕಾಂಬೋಡಿಯಾದಲ್ಲಿ ಇರುವ ಆತ ಅಲ್ಲಿಂದಲೇ ಆನ್ಲೈನ್ ಮೂಲಕ ಅಮಾಯಕರನ್ನು ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಕ್ರಮ

‘ಖಾತೆ ತೆರೆಯುವ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು, ಗ್ರಾಹಕರ ಪೂರ್ವಾಪರ ತಿಳಿದಿರಬೇಕು. ಗ್ರಾಹಕರ ಪೂರ್ವಾಪರ ವಿಚಾರಿಸದೇ ಚಾಲ್ತಿ ಖಾತೆ ತೆರೆಯಲಾಗಿದೆ. ಚಾಲ್ತಿ ಖಾತೆ ತೆರೆಯಲು ಕೆಲವು ಮಾನದಂಡಗಳಿವೆ. ಅದನ್ನು ಅನುಸರಿಸದೇ ಇದ್ದರೆ ಬ್ಯಾಂಕ್ ಅಧಿಕಾರಿಗಳನ್ನೂ ಹೊಣೆ ಮಾಡಿ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ’ ಎಂದು ದಯಾನಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.