ಮಾಲೀಕರು ಸಹಕರಿಸಿ: ಮೌದ್ಗಿಲ್
‘ನಗರದ ಆಸ್ತಿಗಳ ಅಕ್ಷಾಂಶ, ರೇಖಾಂಶ (ಲ್ಯಾಟಿಟ್ಯೂಡ್ ಮತ್ತು ಲಾಂಗಿಟ್ಯೂಡ್) ಸೆರೆಹಿಡಿಯಲು ಪ್ರತಿ ವಾರ್ಡ್‌ಗೆ 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ಬಂದಾಗ ಆಸ್ತಿ ಮಾಲೀಕರು ಅವರೊಂದಿಗೆ ಸಹಕರಿಸಬೇಕು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮನವಿ ಮಾಡಿದರು.
‘ಅಕ್ಷಾಂಶ, ರೇಖಾಂಶದ ಮಾಹಿತಿ ಸರಿಯಾಗಿ ದಾಖಲಾಗುವಂತೆ ಆಸ್ತಿಗಳ ಮಾಲೀಕರು ಎಚ್ಚರಿಕೆ ವಹಿಸಬೇಕು’ ಎಂದರು.