ಬೆಂಗಳೂರು: ಕೇಂದ್ರ ಸರ್ಕಾರವು ನಿಷೇಧಿಸಿದ್ದ ಇ–ಸಿಗರೇಟ್ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ದಾಳಿ ನಡೆಸಿ, ₹1.25 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ನಗರದ ಕುಂಬಾರಪೇಟೆ ನಂಬೂದರಿ ಮ್ಯಾನ್‌ಷನ್ 2ನೇ ಮಹಡಿ ವರ್ಧಮಾನ್ ಮಾರ್ಕೆಟಿಂಗ್ ಎಂಬ ಗೋದಾಮಿನಲ್ಲಿ ಇ–ಸಿಗರೇಟ್ ಅನ್ನು ದಾಸ್ತಾನು ಮಾಡಲಾಗಿತ್ತು. ಆರೋಪಿಗಳಾದ ಸಚಿನ್ ಹಾಗೂ ಸಿದ್ದಲಿಂಗ ಎಂಬುವವರನ್ನು ಬಂಧಿಸಲಾಗಿದೆ.

‘ವಿವಿಧ ಕಂಪನಿಯ 2,850 ಇ–ಸಿಗರೇಟ್, 8 ಸಾವಿರ ವಿವಿಧ ಫ್ಲೇವರ್‌ನ ಇ–ಸಿಗರೇಟ್ ಲಿಕ್ವಿಡ್, 2,227 ಸಿಗರೇಟ್ ಪಾಡ್, ಇ–ಸಿಗರೇಟ್ ಬಿಡಿ ಭಾಗಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇದೇ ಗೋದಾಮಿನ ಮೇಲೆ ಮೂರು ಬಾರಿ ದಾಳಿ ನಡೆಸಲಾಗಿತ್ತು. ಪದೇ ಪದೇ ಕಳ್ಳಮಾರ್ಗದಲ್ಲಿ ನಿಷೇಧಿತ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಪಾರ್ಟಿ, ಇವೆಂಟ್ಗಳಿಗೆ ಇ–ಸಿಗರೇಟ್ ಪೂರೈಸುತ್ತಿದ್ದರು. ಜತೆಗೆ ಆನ್‌ಲೈನ್ ಮೂಲಕವು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಇ-ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದು ಕೇಂದ್ರ ಸರ್ಕಾರವು ಈ ಹಿಂದೆಯೇ ನಿಷೇಧ ಮಾಡಿತ್ತು. ಆದರೂ, ಆರೋಪಿಗಳು ಹೊರ ರಾಜ್ಯದಿಂದ ಇ–ಸಿಗರೇಟ್, ಅದರ ಲಿಕ್ವಿಡ್, ಪಾಡ್ ಹಾಗೂ ಬ್ಯಾಟರಿ ಹಾಗೂ ಇತರೆ ಬಿಡಿಭಾಗಗಳನ್ನು ತಂದು ಮಾರಾಟ ಮಾಡುತ್ತಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.