ಬೆಂಗಳೂರು: ₹ 150 ಕೋಟಿ ವೆಚ್ಚದಲ್ಲಿ 320 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಪಡೆಯಲು ಸಚಿವ ಸಂಪುಟವು ಒಪ್ಪಿಗೆ ನೀಡಿದ್ದು ಈ ಕ್ರಮವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಖಂಡಿಸಿದೆ.

'ಎಲೆಕ್ಟ್ರಿಕ್ ಬಸ್‌ಗಳನ್ನು 'ಫೇಮ್' ಯೋಜನೆಯ ಹಣ ಪಡೆದು ಬಿಎಂಟಿಸಿಯೇ ನಡೆಸಬೇಕು. ಗುತ್ತಿಗೆ ಆಧಾರಿತ ಬಸ್‌ಗಳು ಬಂದರೆ ಕಾರ್ಮಿಕರ ಉದ್ಯೋಗ ಕಡಿತವಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರ್ಕಾರವೇ ನಿಗಮಗಳ ಮೂಲಕ ಒದಗಿಸಬೇಕು' ಎಂದು ಅಧ್ಯಕ್ಷ ಎಚ್.ಡಿ.ರೇವಪ್ಪ ಆಗ್ರಹಿಸಿದ್ದಾರೆ.

'ಗುತ್ತಿಗೆ ಪಡೆದ ಬಸ್‌ಗೆ ಪ್ರತಿ ಕಿ.ಮೀಗೆ ₹ 51ರಂತೆ ಹಣ ಪಾವತಿಸಬೇಕು. ಗುತ್ತಿಗೆ ಬಸ್ ಓಡುವ ಮಾರ್ಗದಲ್ಲಿ ನಿರೀಕ್ಷಿತ ಆದಾಯ ಗಳಿಕೆ ಆಗದಿದ್ದರೆ ನಿಗಮವೇ ಭರಿಸಬೇಕು. ಒಪ್ಪಂದದ ಪ್ರಕಾರ ಗುತ್ತಿಗೆದಾರನಿಗೆ ಹಣ ಕೊಡಲೇಬೇಕು. ಬಿಎಂಟಿಸಿ ಸಾವಿರಾರು ಕೋಟಿ ಹಣದ ಕೊರತೆಯಿಂದ ಬಳಲುತ್ತಿದೆ. ಇನ್ನಷ್ಟು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ ಒಂದೊಂದೇ ಘಟಕಗಳನ್ನು ಖಾಸಗಿಯವರಿಗೆ ವಹಿಸುವ ದಿನಗಳು ದೂರವಿಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.