ಯಲಹಂಕ: ‘ಪ್ರತಿಯೊಬ್ಬ ನಾಗರಿಕರಲ್ಲೂ ನಮ್ಮ ನೆಲದ ಕಾನೂನಿನ ಸೂಕ್ತ ಗ್ರಹಿಕೆ ಮತ್ತು ಅರಿವು ಇರಬೇಕು. ಅದರಲ್ಲೂ ಯುವಜನಾಂಗ ಈ ದಿಸೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು, ನಾಗರಿಕರಲ್ಲಿ ತಿಳಿವಳಿಕೆ ಮೂಡಿಸಬೇಕು‘ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪ್ರತಿಪಾದಿಸಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಉತ್ಸವ ‘ಅನಾದ್ಯಂತ–2024’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಅರಿವು ಬಹಳ ಮುಖ್ಯ. ಕಾನೂನಿನ ಜ್ಞಾನವಿಲ್ಲದವರು ತಮಗೇ ತಿಳಿಯದಂತೆ ಅಪರಾಧಗಳ ಸುಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಾರೆ. ಕಾನೂನಿನ ಅರಿವಿದ್ದರೆ ಅಕ್ರಮಗಳ ಸುಳಿಗೆ ಸಿಲುಕುವುದನ್ನು ತಡೆಯಬಹುದು‘ ಎಂದು ಅಭಿಪ್ರಾಯಪಟ್ಟರು.

ಚಿತ್ರನಟಿ ಸಪ್ತಮಿಗೌಡ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಎಷ್ಟೇ ನಿರಾಸಕ್ತಿ ತೋರಿದರೂ, ಅಂಥವರಿಗೆ ತಾಳ್ಮೆಯಿಂದ ಪಾಠಹೇಳಿ ಜ್ಞಾನದ ಅರಿವು ಮೂಡಿಸುವ ಅಧ್ಯಾಪಕರು ದೇವರಿಗೆ ಸಮಾನ. ವಿದ್ಯಾರ್ಥಿಗಳು ಅಧ್ಯಾಪಕರನ್ನು ಗೌರವಿಸಿದರೆ, ಶೈಕ್ಷಣಿಕ ಬದುಕು ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.

ನಿಟ್ಟೆ ಶಿಕ್ಷಣಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪ್ರೊ.ಸಂದೀಪ್ ಶಾಸ್ತ್ರಿ, ಪ್ರಾಚಾರ್ಯ ಡಾ.ಎಚ್.ಸಿ.ನಾಗರಾಜ್, ಆಡಳಿತಾಧಿಕಾರಿ ರೋಹಿತ್ ಪೂಂಜಾ, ಶೈಕ್ಷಣಿಕ ಮುಖ್ಯಸ್ಥ ವಿ.ಶ್ರೀಧರ್, ಶಿಕ್ಷಣ ಸಂಯೋಜಕರಾದ ಎನ್.ನಳಿನಿ, ಸುಧೀರ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಐಡಿಯಾಥಾನ್–5.0, ಕೋಡ್ ಸ್ಪ್ರಿಂಟ್–2.0, ಸಿಮ್ ರೇಸಿಂಗ್, ಬಗ್ ಬ್ಯಾಶ್ ಬೊನಾಂಜ, ಫ್ಯಾಶನ್ ಶೋ, ರಸಪ್ರಶ್ನೆ, ಚರ್ಚಾಸ್ಪರ್ಧೆ, ಗುಂಪುನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಮತ್ತು ತಾಂತ್ರಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉತ್ಸವದಲ್ಲಿ ದೇಶದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.