ಬೆಂಗಳೂರು: ‘ನಮ್ಮ ಮೆಟ್ರೊ’ ಹಂತ 3ಎ ಹೆಬ್ಬಾಳ–ಸರ್ಜಾಪುರ ಕಾರಿಡಾರ್ ನಿರ್ಮಾಣಕ್ಕಾಗಿ ಬಿಎಂಆರ್ಸಿಎಲ್ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ಸಭೆಯಲ್ಲಿ ವರದಿ ಚರ್ಚೆಗೆ ಬರಲಿದೆ.

‘ನಮ್ಮ ಮೆಟ್ರೊ’ ಹಳೆಯ ಯೋಜನೆಗಳಲ್ಲಿ ಹೆಬ್ಬಾಳ–ಸರ್ಜಾಪುರ (ಕೆಂಪು) ಮಾರ್ಗ ಕೂಡ ಒಂದಾಗಿದ್ದು, 17 ಎತ್ತರಿಸಿದ ಹಾಗೂ 11 ನೆಲದಡಿಯ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಹೆಬ್ಬಾಳ, ಗಂಗಾನಗರ ಮತ್ತು ಪಶು ವೈದ್ಯಕೀಯ ಕಾಲೇಜು ನಿಲ್ದಾಣದವರೆಗೆ ಎತ್ತರಿಸಿದ ಮಾರ್ಗ ಇರಲಿದೆ. ಅಲ್ಲಿಂದ ಕೋರಮಂಗಲ ಮೂರನೇ ಬ್ಲಾಕ್ ವರೆಗೆ 14.449 ಕಿ.ಮೀ. ಸುರಂಗ ಮಾರ್ಗವನ್ನು ಹೊಂದಿದೆ. ಅಲ್ಲಿಂದ ಮುಂದಕ್ಕೆ ಸರ್ಜಾಪುರವರೆಗೆ ಮತ್ತೆ ಎತ್ತರಿಸಿದ ಮಾರ್ಗ ಇರಲಿದೆ. 22.136 ಕಿ.ಮೀ. ಎತ್ತರಿಸಿದ ಮಾರ್ಗ ಸೇರಿ ಒಟ್ಟು 36.585 ಕಿ.ಮೀ. ಉದ್ದದ ಮಾರ್ಗ ಇದಾಗಿದೆ.

₹28,405 ಕೋಟಿ ಅಂದಾಜು ಮೊತ್ತದ ಯೋಜನೆಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿ ಹಣಕಾಸು ಇಲಾಖೆಗೆ ಕಳುಹಿಸಿತ್ತು. ಅನುಮೋದನೆಗಾಗಿ ಸಂಪುಟ ಸಭೆಯಲ್ಲಿ ಚರ್ಚಿಸುವ ಮೊದಲು ಆರ್ಥಿಕ ಪರಿಣಾಮದ ಬಗ್ಗೆ ಹಣಕಾಸು ಇಲಾಖೆ ಪರಿಶೀಲನೆ ನಡೆಸಬೇಕಿತ್ತು. ಮೂರೇ ವಾರದಲ್ಲಿ ಆರ್ಥಿಕ ಇಲಾಖೆ ಪ್ರಸ್ತಾವಕ್ಕೆ ಅನುಮೋದಿಸಿದೆ.

ಹಣಕಾಸು ಇಲಾಖೆ ಒಪ್ಪಿಗೆ ನೀಡಿರುವುದನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಖಚಿತಪಡಿಸಿದ್ದಾರೆ.

ಡಬಲ್ ಡೆಕರ್ (ರೋಡ್ ಕಂ ರೇಲ್) ಪ್ರಸ್ತಾವ ಇದ್ದರೂ ಅದು ಮೂಲ ಡಿಪಿಆರ್ನಲ್ಲಿ ಇಲ್ಲದೇ ಪ್ರತ್ಯೇಕ ಯೋಜನೆ ಆಗಿರುವುದರಿಂದ ಮೂಲ ಡಿಪಿಆರ್ಗೆ ತ್ವರಿತವಾಗಿ ಒಪ್ಪಿಗೆ ಸಿಕ್ಕಿದೆ. ಈ ಕಡತ ಮತ್ತೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗೆ ಬರಲಿದೆ. ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಪರಿಶೀಲಿಸಿದ ಬಳಿಕ ಸಂಪುಟ ಸಭೆಯ ಅನುಮತಿಗೆ ಕಡತ ಮಂಡಿಸಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಈ ವರ್ಷದ ಅಂತ್ಯದ ಒಳಗೆ ಡಿಪಿಆರ್ ಸಲ್ಲಿಕೆಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.