ಬೆಂಗಳೂರು: ‘ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು’ ಎಂದು ಒತ್ತಾಯಿಸಿ ದಿಢೀರ್ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ.

‘ಬಹುತ್ವ ಕರ್ನಾಟಕ ಹಾಗೂ ಇತರೆ ಸಂಘಟನೆಗಳು, ಎಂ.ಜಿ. ರಸ್ತೆಯಲ್ಲಿ ಸೋಮವಾರ (ಅ. 16) ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಾಕಾರರ ವಿರುದ್ಧ ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿನಯ್ ಶ್ರೀನಿವಾಸ್, ಬಾಬು ಪ್ರಸಾದ್ ಎ.ಎಸ್., ಫಹಾದ್ ಖಾನ್, ಇಮ್ರಾನ್, ಮೊಹಮ್ಮದ್ ಅಶ್ವಾಸ್, ಸೈಯದ್ ಅಬ್ಬಾಸ್, ಲಿಯೊ ಜಾನ್, ಮೊಹಮ್ಮದ್ ಸೈಪುದ್ದೀನ್, ಮೊಹಮ್ಮದ್ ಇಸ್ಮಾಯಿಲ್, ಸುಹೇಬ್, ಉಮರ್ ಹಾಗೂ ಇತರರನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ತಿಳಿಸಿವೆ.

‘ಬಹುತ್ವ ಕರ್ನಾಟಕ ಸಂಘಟನೆಯ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಪ್ರತಿಭಟನೆ ಬಗ್ಗೆ ಸಂದೇಶ ಕಳುಹಿಸಲಾಗಿತ್ತು. ಅದರಂತೆ ಸುಮಾರು 150 ಮಂದಿ, ಎಂ.ಜಿ.ರಸ್ತೆಯಲ್ಲಿ ಸೇರಿದ್ದರು. ಪಾದಚಾರಿ ಮಾರ್ಗದಲ್ಲಿ ಸಾಲುಗಟ್ಟಿ ನಿಂತು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.’

‘ನಗರದ ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿದರೆ, ಬೇರೆ ಯಾವ ಭಾಗದಲ್ಲೂ ಪ್ರತಿಭಟನೆಗೆ ಅವಕಾಶವಿಲ್ಲ. ಈ ಬಗ್ಗೆ ಹೈಕೋರ್ಟ್ ಆದೇಶವಿದೆ. ಅಷ್ಟಾದರೂ ಪ್ರತಿಭಟನಕಾರರು, ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಗುಂಪು ಸೇರಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.