ಬೆಂಗಳೂರು: ನಗರದ8 ತಿಂಗಳ ಮಗುವೊಂದು ನುಂಗಿದ್ದ 2ಸೆಂ.ಮೀ. ಅಗಲದ ಬಾಟಲಿ ಮುಚ್ಚಳವನ್ನು ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಇಎನ್ಟಿ ತಜ್ಞ ಡಾ.ಎಚ್.ಕೆ. ಸುಶೀನ್ ದತ್ ಹಾಗೂ ಡಾ. ನರೇಂದ್ರನಾಥ್ ಅವರ ತಂಡ ಮಗುವಿಗೆ ಚಿಕಿತ್ಸೆ ನೀಡಿದೆ. ಆಟ ಆಡುತ್ತಿರುವ ವೇಳೆ ಮಗು ಬಾಟಲಿ ಮುಚ್ಚಳ ನುಂಗಿತ್ತು.

‘ಮಗು ಮುಚ್ಚಳ ನುಂಗಿದ್ದು ಪೋಷಕರಿಗೂ ತಿಳಿದಿರಲಿಲ್ಲ. ವಾರವಾಗುತ್ತಿದ್ದಂತೆ ಮಗುವಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡು, ಆಹಾರ ಸೇವಿಸುತ್ತಿರಲಿಲ್ಲ.ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ಧ್ವನಿ ಹೊರಡುತ್ತಿತ್ತು. ಇದರಿಂದ ಗಾಬರಿಯಾದ ಪೋಷಕರು, ಮಗುವನ್ನು ಆಸ್ಪತ್ರೆಗೆ ಕರೆ ತಂದರು. ಪ್ರಾರಂಭಿಕ ತಪಾಸಣೆ ನಡೆಸಿದಾಗ ಶ್ವಾಸಕೋಶದ ಸಮಸ್ಯೆ ಇರಬಹುದೆಂದು ತಿಳಿದಿದ್ದೆವು. ಆದರೆ, ಕೆಲ ಅನುಮಾನದಿಂದ ಲಾರಿಂಗೋಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಲಾಯಿತು. ಆಗ 2 ಸೆಂ.ಮೀ. ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ತಿಳಿಯಿತು’ ಎಂದುಡಾ. ನರೇಂದ್ರನಾಥ್ ತಿಳಿಸಿದರು.

‘ಮನೆಯಲ್ಲಿ ಮಕ್ಕಳ ಕೈಗೆ ಸಣ್ಣ ವಸ್ತುಗಳು ಸಿಗದಂತೆ ಎಚ್ಚರ ವಹಿಸುವುದು ಅವಶ್ಯಕ. ತಿಳಿಯದೇ ಕೆಲವು ವೇಳೆ ವಸ್ತುಗಳನ್ನು ನುಂಗಿ, ಜೀವಕ್ಕೆ ಅಪಾಯ ತಂದುಕೊಳ್ಳುತ್ತವೆ’ ಎಂದುಡಾ.ಎಚ್.ಕೆ. ಸುಶೀನ್ ದತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.