ಬೆಂಗಳೂರು: ‘ಬರವಣಿಗೆಯ ಜತೆಗೆ ಚಳವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಗೌರಿ ಲಂಕೇಶ್ ಸ್ಪಂದಿಸು ತ್ತಿದ್ದರು’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಚಾರು ಪ್ರಕಾಶನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜೇಶ್ವರಿ ಭೋಗಯ್ಯ ಅವರು ರಚಿಸಿದ ‘ಗೌರಿಯೊಂದಿಗೆ ಏಕಾಂತ–ಲೋಕಾಂತ’ ಪುಸ್ತಕವನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ಜನಪರ ನಿಲುವು ತಳೆಯುತ್ತಿದ್ದ ಗೌರಿ ಅವರ ಜೀವನವು ತೆರೆದ ಪುಸ್ತಕ ವಾಗಿದೆ. ಅವರು ಕೊಲೆಯಾಗುವಂತಹ ಅಪರಾಧವನ್ನು ಮಾಡಿರಲಿಲ್ಲ. ಕರ್ನಾಟಕದ ಚಳವಳಿಗಳ ಸಂಗಾತಿ ಯಾಗಿದ್ದ ಅವರು, ನಾಡಿನಲ್ಲಿ ನಡೆಯುತ್ತಿದ್ದ ಎಲ್ಲ ಹೋರಾಟಗಳ ಜತೆಗೆ ನಂಟ
ನ್ನು ಹೊಂದಿದ್ದರು’ ಎಂದು ತಿಳಿಸಿದರು.

ನಾವೇ ಕರ್ನಾಟಕ ಸಂಘಟನೆಯ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ ಮಾತನಾಡಿ, ‘ಹಲವರು ‘ನಾನು ಗೌರಿ’ ಅಂತ ಹೇಳುತ್ತಾರೆ. ಆದರೆ, ಅವರ ರೀತಿ ಆಗುವುದು ಅಷ್ಟು ಸುಲಭವಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಬಂದಾಗ ಅವರಿಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ತಂದೆಯ ಹೆಸರು ಉಳಿಸಬೇಕು ಎಂಬ ಉದ್ದೇಶದಿಂದ ಕನ್ನಡವನ್ನು ಸರಿಯಾಗಿ ಕಲಿತು, ಪತ್ರಿಕೆ ಮುನ್ನಡೆಸಿದರು. ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಂಡು, ಇಲ್ಲಿನ ಜನರ ಮನಸ್ಸಿನಲ್ಲಿ ಉಳಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.