ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿ ಅಂಗೀಕರಿಸಿದ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಶಾಸಕರು ಸತತ ಮೂರನೇ ದಿನವೂ ಸದನದಲ್ಲಿ ಪ್ರತಿಭಟನೆ ನಡೆಸಿದರು.

ಇದರಿಂದಾಗಿ ಇಂದು ನಡೆದ ಕಲಾಪದಲ್ಲೂ ಗದ್ದಲ, ಪ್ರತಿಭಟನೆಗಳು ಮುಂದುವರಿಯಿತು. ಪರಿಣಾಮ ಸ್ಪೀಕರ್ ಸೂಚನೆಯಂತೆ ವಿರೋಧ ಪಕ್ಷದ 12 ಸದಸ್ಯರು ಮತ್ತು ಅವಾಮಿ ಇತೆಹಾದ್ ಪಕ್ಷದ ಶಾಸಕ ಶೇಖ್ ಖುರ್ಷಿದ್ ಅವರನ್ನು ಮಾರ್ಷಲ್ಗಳು ಸದನದಿಂದ ಹೊರಹಾಕಿದ್ದಾರೆ.

ಇಂದು ಕಲಾಪ ಆರಂಭವಾದ್ದಂತೆ 'ಪಾಕಿಸ್ತಾನ ಅಜೆಂಡಾ ನಡೆಯಲ್ಲ' ಎಂದು ವಿಪಕ್ಷದ ಸದಸ್ಯರು ಘೋಷಣೆಗಳು ಕೂಗಿದರು.

ಬಿಜೆಪಿಯ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ಬಿಜೆಪಿ ಸದಸ್ಯರನ್ನು ಸದನದಿಂದ ಹೊರಕ್ಕೆ ಕಳುಹಿಸುವಂತೆ ನಿರ್ದೇಶನ ನೀಡಿದರು. ಭಾರಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಗಿತ್ತು. ಇದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
.ಜಮ್ಮು-ಕಾಶ್ಮೀರ: ಸದನದಲ್ಲಿ ಗದ್ದಲ; ಬಿಜೆಪಿ ಸದಸ್ಯರನ್ನು ಹೊರಹಾಕಿದ ಮಾರ್ಷಲ್ಗಳು.ವಿಶೇಷ ಸ್ಥಾನಮಾನ ಮರುಸ್ಥಾಪನೆ: ಜಮ್ಮು& ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.