ಬೆಂಗಳೂರು: ‘ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಅವರ ಬದುಕಿನ ಆದರ್ಶ ಮತ್ತು ವೈಚಾರಿಕತೆಯ ಪ್ರಜ್ಞೆಯನ್ನು ಯುವಜನರು ಮೈಗೂಡಿಸಿಕೊಳ್ಳಬೇಕು’ ಎಂದು ಶಿಕ್ಷಣ ತಜ್ಞ ಕೆ.ಪಿ. ಪುತ್ತೂರಾಯ ತಿಳಿಸಿದರು.

ಜಯನಗರದ ನ್ಯಾಷನಲ್ ಕಾಲೇಜು ನಗರದಲ್ಲಿ ಗುರುವಾರ ಹಮ್ಮಿಕೊಂಡ ಎಚ್. ನರಸಿಂಹಯ್ಯ ಅವರ 105ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ವಿದೇಶದಲ್ಲಿ ಉನ್ನತ ವ್ಯಾಸಂಗ, ಉನ್ನತ ಹುದ್ದೆಗಳು, ಅಗಣಿತ ಗೌರವಗಳು ಅರಿಸಿ ಬಂದರೂ ನರಸಿಂಹಯ್ಯ ಅವರು ಬದುಕಿನುದ್ದಕ್ಕೂ ಆಡಂಬರ ತೋರಲಿಲ್ಲ. ಗಾಂಧಿ ಮಾರ್ಗದ ಸರಳ ಬದುಕು ಮೈಗೂಡಿಸಿಕೊಂಡ ಅವರು, ಇಡೀ ಜೀವನವನ್ನು ಶಿಕ್ಷಣಕ್ಕಾಗಿ ಮೀಸಲಿಡುವ ಮೂಲಕ ಸಂತರ ರೀತಿಯಲ್ಲಿ ಬದುಕಿದರು. ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ಧೃಢವಾದ ನಂಬಿಕೆಯನ್ನು ಹೊಂದಿದ್ದ ಅವರು, ಮೌಢ್ಯದ ವಿರುದ್ಧ ಸತತ ಹೋರಾಡಿದರು. ಅವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು, ಅವರು ಪ್ರತಿಪಾದಿಸಿದ ಸರಳ ಜೀವನ ಹಾಗೂ ನಿಸ್ವಾರ್ಥ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಎಚ್.ಎನ್. ಸುಬ್ರಹ್ಮಣ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ವಿ. ವೆಂಕಟಶಿವಾ ರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್ ಇಸ್ತೂರಿ, ಖಜಾಂಚಿ ತಲ್ಲಮ್ ಆರ್. ದ್ವಾರಕನಾಥ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.