ಬೆಂಗಳೂರು: ‘ಸಿಲಿಕಾನ್ ಸಿಟಿ’ಯ ಹಲವು ಭಾಗಗಳಲ್ಲಿ ಮಂಗಳವಾರ ಹೋಳಿ ಹಬ್ಬವನ್ನು ಪುಟಾಣಿಗಳು ಹಾಗೂ ಯುವಕ–ಯುವತಿಯರು ಆಚರಿಸಿದರು. ಹಲವು ರಸ್ತೆಗಳು ಬಣ್ಣದೋಕುಳಿಯಲ್ಲಿ ಮಿಂದವು.

ಮಂಗಳವಾರ ಪುಟ್ಟ ಮಕ್ಕಳು ಒಳಾಂಗಣ, ತಮ್ಮ ಬಡಾವಣೆಯ ರಸ್ತೆ ಹಾಗೂ ತಮ್ಮ ಮನೆಯ ಮಹಡಿಯಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು. ಪಿಚಕಾರಿಯಿಂದ ಬಣ್ಣದ ನೀರು ಚಿಮ್ಮಿಸಿದರು. ಕೆಲವು ವಸತಿ ಸಮುಚ್ಚಯಗಳು ಹಾಗೂ ಮನೆಗಳಲ್ಲಿ ಪರಸ್ಪರ ಬಣ್ಣ ಹಚ್ಚಿ, ಸಿಹಿ ಸವಿದರು. ಚಿಕ್ಕಪೇಟೆಯಲ್ಲಿ ವ್ಯಾಪಾರಸ್ಥರು ಬಣ್ಣ ಎರಚಿ ಖುಷಿಪಟ್ಟರು.

ಕಮ್ಮಗೊಂಡನಹಳ್ಳಿ, ಯಲಹಂಕ, ರಾಜಾಜಿನಗರ, ಪೀಣ್ಯ, ಸುಮ್ಮನಹಳ್ಳಿ, ವಿ.ವಿ.ಪುರಂ, ವಸಂತನಗರ, ದಾಸರಹಳ್ಳಿ, ಕೆಂಗೇರಿ, ವಿಜಯನಗರ, ದೀಪಾಂಜಲಿನಗರ, ದೊಮ್ಮಲೂರು, ಇಂದಿರಾನಗರ, ನಾಯಂಡಹಳ್ಳಿ, ಬನಶಂಕರಿ, ಬಸನಗುಡಿ, ಜೆ.ಪಿ.ನಗರ, ಐಟಿಐ ಕಾಲೊನಿ, ಮಹಾಲಕ್ಷ್ಮಿ ಬಡಾವಣೆ ಸೇರಿದಂತೆ ಹಲವು ಕಡೆ ಮಕ್ಕಳು ಪಿಚಕಾರಿ ಹಿಡಿದು ಬಣ್ಣ ಎರಚಿದರು.

ಇಂದು ಸಾಮೂಹಿಕ ಆಚರಣೆ: ಬುಧವಾರ ನಗರದ ಬಹುತೇಕ ಭಾಗದಲ್ಲಿ ಹೋಳಿ ಸಂಭ್ರಮ ನಡೆಯಲಿದೆ. ಹೊರರಾಜ್ಯದಿಂದ ಬಂದಿರುವ ವ್ಯಾಪಾರಸ್ಥರು ಸಾಮೂಹಿಕ ಹೋಳಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.

ಕೆಲವು ಹೋಟೆಲ್ಗಳು ಹಾಗೂ ನಗರದ ಹೊರವಲಯದಲ್ಲೂ ಹೋಳಿ ಆಚರಣೆಗೆ ವೇದಿಕೆ ಸಿದ್ಧವಾಗಿದೆ. ಡಿಜೆ ಸಂಗೀತದ ಅಬ್ಬರದ ಜತೆಗೆ ಬಣ್ಣದೋಕುಳಿಯು ಹಬ್ಬವನ್ನು ರಂಗೇರಿವಂತೆ ಮಾಡಲಿದೆ. ಮಂಗಳವಾರ ಹಲವು ಕಡೆ ಮಕ್ಕಳು ಪಿಚಕಾರಿ ಹಾಗೂ ಬಣ್ಣವನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಣ್ಣ ಎರಚಿ ಸಂಭ್ರಮಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.