ಬೆಂಗಳೂರು: ಬಸವೇಶ್ವರರು ವಿಶ್ವ ಕಂಡ ಅದ್ಭುತ ವಿಭೂತಿ ಪುರುಷ. ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ನಗರದ ಬಸವ ಸಮಿತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಬಸವರಾಜ ಡೋಣೂರ ಅವರ ‘ದಿ ಪೊಯಟ್ರಿ ಆಫ್ ಜಿ.ಎಂ.ಹಾಪ್ಕಿನ್ಸ್ ಮತ್ತು ಬಸವಣ್ಣ: ಎ ಕಂಪ್ಯಾರಿಟಿವ್ ಸ್ಟಡಿ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ವಿಶ್ವಾತ್ಮಕ ಸಂಗತಿಗಳನ್ನು ಒಳಗೊಂಡ ಬಸವರಾಜ ಡೋಣೂರರ ಈ ಕೃತಿ ಭಾರತೀಯ ಸಾಹಿತ್ಯದಲ್ಲಿ ಒಂದು ಮೈಲುಗಲ್ಲು. ಬಸವರಾಜ ಡೋಣೂರ ಒಳ್ಳೆಯ ಶಿಕ್ಷಕ, ಒಳ್ಳೆಯ ಲೇಖಕ ಮತ್ತು ಒಳ್ಳೆಯ ಆಡಳಿತಗಾರ ಆಗಿರುವ ಫಲವಾಗಿಯೇ ಇಂತಹ ಕೃತಿ ರಚಿಸಲು ಸಾಧ್ಯವಾಗಿದೆ. ಇದು ಭಾರತೀಯ ಭಾಷೆಗೆ ನೀಡಿದ ಬಹುದೊಡ್ಡ ಕೊಡುಗೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಮನು ಬಳಿಗಾರ, ‘ಡೋಣೂರ ಅವರು ಕೃತಿಯಲ್ಲಿ ಹಲವು ಒಳನೋಟಗಳನ್ನು ನೀಡಿದ್ದಾರೆ. ಇಬ್ಬರು ಮಹತ್ವದ ಕವಿಗಳು ಮತ್ತು ಅದ್ಯಾತ್ಮ ಪಿಪಾಸುಗಳ ಬಗ್ಗೆ ಹೊಸ ಹೊಳಹುಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಕನ್ನಡಕ್ಕೆ ಅನುವಾದಗೊಳ್ಳುವ ಅಗತ್ಯವಿದೆ’ ಎಂದರು.

ಕೃತಿ ರಚನೆಕಾರ ಬಸವರಾಜ ಡೋಣೂರ, ‘12ನೇ ಶತಮಾನದ ಬಸವಣ್ಣ, 16ನೇ ಶತಮಾನದ ಹಾಪ್ಕಿನ್ಸ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಆಧ್ಯಾತ್ಮ ಮತ್ತು ಧರ್ಮದ ಬಗ್ಗೆ ಒಂದೇ ರೀತಿಯಲ್ಲಿ ಚಿಂತನೆ ಮಾಡುತ್ತಿದ್ದರು. ಭಾಷಿಕ, ತಾತ್ವಿಕ, ಆಧ್ಯಾತ್ಮಿಕ ಮತ್ತು ನೈತಿಕ ಸಾಮ್ಯಗಳು ಇವೆ. ಇದೊಂದು ತೌಲನಿಕ ಅಧ್ಯಯನ. ವಿಶ್ವ ಸಾಹಿತ್ಯದ ಅಧ್ಯಯನಕ್ಕೆ ಈ ಕೃತಿ ಸಹಾಯಕಾರಿಯಾಗಲಿದೆ’ ಎಂದು ವಿವರಿಸಿದರು.

ಲೇಖಕರಾದ ವಿಕ್ರಂ ವಿಸಾಜಿ, ಎಚ್.ಎಸ್.ಪ್ರಕಾಶ್ ಕೃತಿ ಕುರಿತು ಮಾತನಾಡಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಬಸವಪೀಠದ ಸಂಯೋಜಕ ಡಾ.ಗಣಪತಿ ಶಿನ್ನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.