ಬೆಂಗಳೂರು: ‘ನನಗೂ ಲೈಂಗಿಕ ಕಿರುಕುಳ ಆಗಿದೆ (ಮೀ ಟೂ)ಎಂದು ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ಇದರಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಯಿತು. ಅದಕ್ಕಾಗಿ ಖಂಡಿತ ವಿಷಾದ ಇಲ್ಲ’ ಎಂದು ನಟಿ ಶ್ರುತಿ ಹರಿಹರನ್ ಹೇಳಿದರು.

‘ಮುಟ್ಟಿದ್ದರೆ ಹೇಳಿ, ಮಾತನಾಡಿದ್ದರೆ ಹೇಳಬೇಡಿ ಎಂಬ ಧೋರಣೆ ವಕೀಲರ ವಲಯದಲ್ಲೂ ಇದೆ. ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನೀಡಬಹುದು, ಮೀ ಟೂಗೆ ಸಾಕ್ಷ್ಯ ಎಲ್ಲಿಂದ ತರಲಿ. ವಕೀಲರು ಸೂಕ್ಷ್ಮ ಸಂವೇದಿಯಾಗಿಲ್ಲದಿದ್ದರೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಸಿಗುವುದು ಕಷ್ಟವೇನೊ’ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶ್ರುತಿ ಬಿಡಿಸಿಟ್ಟ ಅರ್ಜುನ ಅಟ್ಟಹಾಸ; ದೂರಿನಲ್ಲಿ ದೌರ್ಜನ್ಯದ ವಿವರ

‘ಫೇಸ್ಬುಕ್ ಯುಎನ್ ವಿಮೆನ್’ ವತಿಯಿಂದ ಭಾನುವಾರ ಇಲ್ಲಿ ಏರ್ಪಡಿಸಿದ್ದ 'ವಿ ದ ವುಮೆನ್' ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ತಮಗಾದ ಲೈಂಗಿಕ ಕಿರುಕುಳ, ಹಿಂಸೆಯನ್ನು ಬಿಚ್ಚಿಟ್ಟರು. ಹಿರಿಯ ಪತ್ರಕರ್ತೆ ಬರ್ಖಾ ದತ್ ಕಾರ್ಯಕ್ರಮ ಸಂಘಟಿಸಿದ್ದರು.

‘ನನ್ನ ಪ್ರಕರಣ ಬೆಳಕಿಗೆ ಬಂದ ಮೇಲಾದರೂ ಮಹಿಳೆಯರು ತಮಗಾದ ನೋವು ಹೇಳಿಕೊಳ್ಳಬೇಕು. ಕನ್ನಡ ಚಿತ್ರರಂಗದಲ್ಲಿ ಇನ್ನಾದರೂ ಆಂತರಿಕ ದೂರು ಸಮಿತಿ (ಐಸಿಸಿ) ರಚಿಸಬೇಕು’ ಎಂದು ಶ್ರುತಿ ಕೇಳಿಕೊಂಡರು.

ಇದನ್ನೂ ಓದಿ:ಚಂಡ ಮಾರುತ ಎಬ್ಬಿಸಿದ ಶ್ರುತಿ #MeToo

ಚಪ್ಪಲಿ ಕೈಗೆ ಬರಲಿ:ವೇದಿಕೆಗೆ ಬಂದ ಶ್ರುತಿ ಅವರ ತಾಯಿ ಜಯಲಕ್ಷ್ಮಿ, ತಮ್ಮ ಪುತ್ರಿ ತೋರಿದ ಧೈರ್ಯಕ್ಕೆ ಶಹಬ್ಬಾಶ್ ಹೇಳಿದರು. ‘ಮೀ ಟೂ ಅನುಭವ ಆದರೆ ಸುಮ್ಮನೆ ಇರಬೇಡಿ. ಚಪ್ಪಲಿ ಕೈಗೆ ಬರಲಿ’ ಎಂದು ಅವರು ಸಲಹೆ ನೀಡಿದರು.

ಮಹಿಳಾ ಉತ್ಸವ ದಿನವಿಡಿ ನಡೆಯಿತು. ಸಾಧಕಿಯರಾದ ಅಥ್ಲೀಟ್ ದ್ಯುತಿ ಚಾಂದ್, ನಿಶಾ ಮಿಲೆಟ್, ನಟಿ ಸಾರಾ ಆಲಿ ಖಾನ್, ಕಿರಣ್ ಮಜುಂದಾರ್ ಷಾ, ಐಎಫ್ಎಸ್ ಅಧಿಕಾರಿ ನಿರುಪಮಾ ರಾವ್ ಸೇರಿ 25ಕ್ಕೂ ಅಧಿಕ ಮಂದಿ ಮಾತನಾಡಿದರು.

‘ಸಂಚಲನ ಮೂಡಿಸಿದ ಕ್ಷಣ’
ಕೆಲಸದ ಸ್ಥಳದಲ್ಲಿ ನಡೆಯುವ ಮಹಿಳಾ ಲೈಂಗಿಕ ದೌರ್ಜನ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ 1997ರಲ್ಲಿ ‘ವಿಶಾಖಾ ಮಾರ್ಗದರ್ಶಿ’ ರೂಪುಗೊಳ್ಳಲು ಕಾರಣಕರ್ತರಾದ ರಾಜಸ್ಥಾನದ ಭನ್ವರಿ ದೇವಿ ಅವರು ವೇದಿಕೆಗೆ ಬಂದಾಗ ಮಿಂಚಿನ ಸಂಚಾರವಾದ ಅನುಭವವಾಯಿತು.

ಬಾಲ್ಯವಿವಾಹವನ್ನು ತಡೆಯಲು ಯತ್ನಿಸಿದ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು.ರಾಜಸ್ಥಾನ ಹೈಕೋರ್ಟ್ನಿಂದ ಅವರಿಗೆ ನ್ಯಾಯ ಸಿಗದಿದ್ದಾಗ ‘ವಿಶಾಖಾ’ ಹೆಸರಿನ ಮಹಿಳಾ ಹಕ್ಕುಹೋರಾಟಗಾರರ ಗುಂಪು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಒಂದು ಮಹತ್ವದಶಾಸನ ರೂಪಿಸುವುದಕ್ಕೆ ದಾರಿ ಮಾಡಿಕೊಟ್ಟಿತ್ತು.

ಇನ್ನಷ್ಟು...

ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

ಸುದೀರ್ಘ ಬರಹ: ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶ್ರುತಿ ಹರಿಹರನ್

ಶ್ರುತಿ ಹರಿಹರನ್ #MeToo ಪತ್ರ: ಸಮಯ ಈಗ ಬಂದಿದೆ!

#MeToo: ಶ್ರುತಿ ಬಿಡಿಸಿಟ್ಟ ಅರ್ಜುನ್ ಸರ್ಜಾ ರೂಪ!

‘ಪಾತ್ರಕ್ಕಾಗಿ ಪಲ್ಲಂಗ’ವೆಂಬ ಉರಿಯ ನಾಲಿಗೆ!

ಸ್ಯಾಂಡಲ್ವುಡ್ನಲ್ಲಿ ಮಿಟೂ: ಚಿತ್ರರಂಗಕ್ಕೆ ಸಂಗೀತಾ ಭಟ್ ವಿದಾಯ!

ಸ್ಯಾಂಡಲ್ವುಡ್ #MeToo: ಶ್ರುತಿ ಹರಿಹರನ್ಗೆ ಹಲವೆಡೆಯಿಂದ ಬೆಂಬಲ

ಅರ್ಜುನ್ಕ್ಷಮೆ ಕೇಳುವುದು ದೊಡ್ಡತನ,ನಾನು ಶ್ರುತಿ ಹರಿಹರನ್ ಪರ:ಪ್ರಕಾಶ್ ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.